Publish Date: Mon, 10 Jan 2022 (20:39 IST)
Updated Date: Mon, 10 Jan 2022 (20:42 IST)
ನಗರದ ಕಂಕನಾಡಿಯ ಮುಖ್ಯರಸ್ತೆಯಲ್ಲಿ ಮಾಯಾ ಇಂಟರ್‌ನ್ಯಾಷನಲ್ ಹೋಟೆಲ್ ಕಟ್ಟಡದಲ್ಲಿರುವ ಎಲ್.ಜಿ. ಇಲೆಕ್ಟ್ರಾನಿಕ್ ಸಾಮಗ್ರಿಗಳು ಶೋರೂಮ್‌ನಲ್ಲಿ ಸೋಮವಾರ ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ.
ಇದರಿಂದ ಎಲ್ಜಿ ಶೋರೂಮ್ನಲ್ಲಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು ಸಂಪೂರ್ಣ ಸುತ್ತು ಕರಕನ್ನು ಹೊಂದಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಇಂದು ಬೆಳಗ್ಗೆ 8 ಗಂಟೆಗೆ ಅಗ್ನಿಶಾಮಕ ಠಾಣೆಗೆ ಫೋನ್ ಕರೆಯ ಆಧಾರದ ಮೇಲೆ ತಕ್ಷಣ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಬೆಂಕಿ ನಂದಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆದರೆ ಅಷ್ಟರಲ್ಲಿ ಶೋರೂಮ್ನಲ್ಲಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು ಸುಮಾರು ಸುಟ್ಟು ಹೋಗಿವೆ.