Publish Date: Fri, 09 Jan 2026 (18:38 IST)
Updated Date: Fri, 09 Jan 2026 (18:42 IST)
ಮಂಗಳೂರು: ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಚುನಾವಣಾ ಬಾಂಡ್ ಹಾಗೂ ಪಿಎಂ ಕೇರ್ಸ್ ನಿಧಿಯ ಮೇಲಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆಯೆಂದು ಸರ್ಕಾರ ಚುನಾವಣಾ ಬಾಂಡ್‌ಗಳು ಮತ್ತು ಪಿಎಂ ಕೇರ್ಸ್ ನಿಧಿಯ ಮೇಲಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪ ಮಾಡಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಹೀರಾರತು ನೀಡಿರುವ ಪ್ರಕರಣ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ಕೋಟಿ ರೂಪಾಯಿಗಳನ್ನು ಒಳಗೊಂಡಿರುವ ಚುನಾವಣಾ ಬಾಂಡ್ ಯೋಜನೆಗೆ ಹಣವನ್ನು ಯಾರು ದಾನ ಮಾಡಿದರು ಅಥವಾ ಅದರಿಂದ ಯಾರು ಲಾಭ ಪಡೆದರು ಎಂಬುದರ ಕುರಿತು ಇನ್ನೂ ಸ್ಪಷ್ಟತೆಯಿಲ್ಲ ಎಂದು ಹೇಳಿದರು.
PM CARES ಅನ್ನು ಸರ್ಕಾರಿ ಟ್ರಸ್ಟ್ ಎಂದು ಘೋಷಿಸಿ, ದುಡ್ಡು ಯಾಕೆ ಸಂಗ್ರಹಿಸಿದರು? ಎಷ್ಟು ಹಣ ಸಂಗ್ರಹ ಆಗಿದೆ? ಎಷ್ಟು ಉಪಯೋಗ ಆಗಿದೆ? ಹಾಗೂ ಚುನಾವಣಾ ಬಾಂಡ್‌ನಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗಿದೆ. ಮೊದಲು ಅವರು ಇದರ ಬಗ್ಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.