Select Your Language

Notifications

webdunia
webdunia
webdunia
webdunia

ಲಿಂಗಾಯತರೇ ಸಿಎಂ ಎಂದು ಘೋಷಿಸಲಿ

Let Lingayats declare themselves CM
bangalore , ಗುರುವಾರ, 20 ಏಪ್ರಿಲ್ 2023 (17:35 IST)
ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ವೀರಶೈವ ಲಿಂಗಾಯತರೇ ಸಿಎಂ ಎಂದು ಘೋಷಿಸಲಿ, ಶೆಟ್ಟರ್ ಅವರನ್ನೇ ಸಿಎಂ ಮಾಡ್ಲಿ ಎಂದು ಸಚಿವ V.ಸೋಮಣ್ಣ ಕಾಂಗ್ರೆಸ್​ಗೆ ಸವಾಲ್​ ಹಾಕಿದ್ದಾರೆ. ಚಾಮರಾಜನಗರದ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಅವರು, ಬಿಜೆಪಿ ಲಿಂಗಾಯತ ವಿರೋಧಿಗಳು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ವೀರೇಂದ್ರ ಪಾಟೀಲರನ್ನು ತೆಗೆದಿದ್ದು ಯಾರು.? ರಾಜಶೇಖರ ಮೂರ್ತಿ ಅವರನ್ನು ಓಡಿಸಿದ್ದು ಯಾರು..? ಲಿಂಗಾಯತರು ದಡ್ಡರಲ್ಲ, ಅವರು ಮತ ಬ್ಯಾಂಕ್ ಆಗಿ ಇಟ್ಟುಕೊಂಡು ಕಾಂಗ್ರೆಸ್ ಏನು ಮಾಡಿಲ್ಲ, ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದ್ರು.. ರಾಜ್ಯಾದ್ಯಂತ ಬಿಜೆಪಿ ಬೆಂಬಲಿಸುತ್ತಾರೆ. ಲಿಂಗಾಯತರನ್ನು ಬ್ಲ್ಯಾಕ್​​​ಮೇಲ್ ಮಾಡಿ ಏನೋ ಮಾಡುತ್ತೇವೆ ಎಂದು ಕಾಂಗ್ರೆಸ್​​​​​​ನವರು ಆಸೆ ಇಟ್ಟುಕೊಂಡಿದ್ದರೆ ಅವರಿಗೆ ನಿರಾಸೆಯಾಗಲಿದೆ. ಅವರಲ್ಲಿ ಅಷ್ಟು ದೊಡ್ಡ ವಿಷನ್ ಇದ್ದರೆ ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಹೇಳಲಿ, ಯೂಸ್ ಅಂಡ್ ಥ್ರೋ ಮಾತುಗಳು ಬೇಡ ಎಂದು ಕಾಂಗ್ರೆಸ್ ವಿರುದ್ಧ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಸಮರಕ್ಕೆ ಸಂಪೂರ್ಣ ಸಿದ್ಧ- ಖರ್ಗೆ