Select Your Language

Notifications

webdunia
webdunia
webdunia
webdunia

ಮುಂದಿನ ಸಿಎಂ ಸಿ.ಟಿ.ರವಿ ಆಗಲಿ : ಈಶ್ವರಪ್ಪ ಘೋಷಣೆ

ಮುಂದಿನ ಸಿಎಂ ಸಿ.ಟಿ.ರವಿ ಆಗಲಿ : ಈಶ್ವರಪ್ಪ ಘೋಷಣೆ
ಚಿಕ್ಕಮಗಳೂರು , ಬುಧವಾರ, 26 ಏಪ್ರಿಲ್ 2023 (11:19 IST)
ಚಿಕ್ಕಮಗಳೂರು : ಮುಂದಿನ ಸಿಎಂ ಸಿ.ಟಿ.ರವಿ ಆಗಲೆಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಘೋಷಣೆ ಮಾಡಿದರು. ಕಡೂರು ತಾಲೂಕಿನ ನಿಡಘಟ್ಟದಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಪಡೆದಿರುವುದು ನಮ್ಮ ಪುಣ್ಯ. ತನ್ನ ಕ್ಷೇತ್ರ ಬಿಟ್ಟು ಪೂರ್ಣ ಬಹುಮತದ ಸರ್ಕಾರಕ್ಕೆ ಓಡಾಡುತ್ತಿದ್ದಾರೆ.
 
ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರೋದು ನಮ್ಮ ಹೆಮ್ಮೆ. ಸಿ.ಟಿ.ರವಿ, ಹಿಂದೂ ಹುಲಿ ಎಂದೇ ಖ್ಯಾತಿಯಾಗಿದ್ದಾರೆ. ಚಿಕ್ಕಮಗಳೂರಿನಿಂದ ಸಿ.ಟಿ ರವಿ ಅವರನ್ನು ಗೆಲ್ಲಿಸಿ, ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಇಂಗಿತ ವ್ಯಕ್ತಪಡಿಸಿದರು.

ರಾಷ್ಟ್ರದ್ರೋಹಿ ಮುಸ್ಲಿಮರು ಮತ ಬೇಡ ಎಂದು ನಿನ್ನೆ, ಇಂದು, ನಾಳೆಯೂ ಹೇಳುತ್ತೇನೆ. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿ ಜೊತೆಯೇ ಇದ್ದಾರೆ. ಸಿದ್ದು-ಡಿಕೆಶಿ ಬಿಜೆಪಿಯನ್ನ ಜಾತಿವಾದಿ ಅಂತಾರೆ. ಒಕ್ಕಲಿಗರು ನನ್ನ ಹಿಂದೆ ಬನ್ನಿ ನಾನು ಸಿಎಂ ಆಗುತ್ತೇನೆ ಅಂತಾರೆ ಡಿಕೆಶಿ, ಸಿದ್ದರಾಮಯ್ಯನವರೂ ಅದೇ ರೀತಿ ಮಾತನಾಡುತ್ತಾರೆ. ಸಿದ್ದು-ಡಿಕೆಶಿ ನೇರವಾಗಿ ಜಾತಿ ರಾಜಕಾರಣ ಮಾಡ್ತಿದ್ದಾರೆ. ಬಿಜೆಪಿಗೆ ಕೋಮುವಾದಿ ರಾಜಕಾರಣ ಅಂತಾರೆ ಎಂದು ಕಿಡಿಕಾರಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮದ್ವೆ ಮಂಟಪಕ್ಕೆ ಬಂದು ವರನಿಗೆ ಆ್ಯಸಿಡ್ ಎರಚಿದ ಮಾಜಿ ಗೆಳತಿ!