Publish Date: Thu, 31 Jan 2019 (17:48 IST)
Updated Date: Thu, 31 Jan 2019 (17:50 IST)
ಶಾಸಕ ಶ್ರೀಮಂತ ಪಾಟೀಲ್ ಹುಟ್ಟುಹಬ್ಬದಲ್ಲಿ ಮರಾಠಿ ಪ್ರೇಮ ಮೆರೆದಿದ್ದು, ಕನ್ನಡಿಗರ ರಕ್ತ ಹೀರಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅಥಣಿ ಶುಗರ್ಸ ಆವರಣದಲ್ಲಿ ಮತದಾರರು ಮತ್ತು ಶ್ರೀಮಂತ ಪಾಟೀಲ್ ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಿತು. ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಶಾಸಕರಾಗಿರುವ ಶ್ರೀಮಂತ ಪಾಟೀಲ್, ಜನ್ಮದಿನಾಚರಣೆಗಾಗಿ ಕನ್ನಡಿಗರು ಮಾಡಿದ ರಕ್ತದಾನ ಮಹಾರಾಷ್ಟ್ರದ ಮೀರಜ್ ಪಟ್ಟಣದ ಶ್ರೀ ಸಿದ್ದಿವಿನಾಯಕ ಕ್ಯಾನ್ಸರ್ ಆಸ್ಪತ್ರೆಗೆ ಕೊಡಲಾಗುತ್ತಿದೆ.
ಕನ್ನಡಿಗರಿಂದ ಪಡೆದ ರಕ್ತದಾನವನ್ನು ಮಹಾರಾಷ್ಟ್ರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಥಣಿ ಹಾಗೂ ಬೆಳಗಾವಿ ಮತ್ತು ಚಿಕ್ಕೋಡಿ ಪಟ್ಟಣಗಳಲ್ಲಿ ಬ್ಲಡ್ ಬ್ಯಾಂಕ್ ಇದ್ದರೂ ಅವನ್ನು ಕಡೆಗಣಿಸಿ ಮಹಾರಾಷ್ಟ್ರದ ಆಸ್ಪತ್ರೆಗೆ ರಕ್ತ ನೀಡಿರುವುದು ಕನ್ನಡಿಗರ ಆಕ್ರೋಶ ಹಾಗೂ ಆರೋಪಗಳಿಗೆ ಕಾರಣವಾಗಿದೆ.