Publish Date: Sat, 13 May 2023 (19:20 IST)
Updated Date: Sat, 13 May 2023 (19:29 IST)
ಕೈ ನಾಯಕರ ಸ್ವಾಗತಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಮುಂಭಾಗ ಕಾಯುತ್ತಿದ್ದಾರೆ. ಕಾಂಗ್ರೆಸ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.ಕೆಪಿಸಿಸಿ ಕಚೇರಿ ಬಳಿ ಜನವೋ ಜನ ಸೇರಿದ್ದು,ಎಲ್ಲೆಡೆ ಕಾಂಗ್ರೆಸ್ ಬಾವುಟಗಳು ಹಾರಡುತ್ತಿದೆ.ವಿವಿಧ ಕಲಾ ತಂಡಗಳಿಂದ ಭರ್ಜರಿ ಸಂಭ್ರಮಾಚರಣೆ ನಡೆಯುತ್ತಿದ್ದು,ಕಾರ್ಯಕರ್ತರು ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.ಸಾವಿರಾರು ಜನ ಸೇರಿರುವ ಹಿನ್ನೆಲೆ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ರು.