Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯಗೆ ಶಾಸಕ ಲಕ್ಷ್ಮಣ್ ಸವದಿ ತಿರುಗೇಟು

ಸಿಎಂ ಸಿದ್ದರಾಮಯ್ಯಗೆ ಶಾಸಕ ಲಕ್ಷ್ಮಣ್ ಸವದಿ ತಿರುಗೇಟು
ಅಧಣಿ , ಶನಿವಾರ, 1 ಜುಲೈ 2017 (12:51 IST)
ಮುಖ್ಯಮಂತ್ರಿಗಳೇ ನಿಮ್ಮ ಸ್ಪರ್ಧೆ ಸವಾಲ್‌ನ್ನು ಸ್ವಿಕರಿಸುತ್ತೇನೆ. ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ. ಕ್ಷೇತ್ರದ ಜನತೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಶಾಸಕ ಲಕ್ಷ್ಮಣ್ ಸವದಿ ಎಂದು ಗುಡುಗಿದ್ದಾರೆ. 
 
ಪ್ರಧಾನಿ ಮೋದಿಯವರನ್ನು ಏಕವಚನದಲ್ಲಿ ಟೀಕಿಸುವುದು ಸರಿಯಲ್ಲ. ಗೌರವ ಕೊಟ್ಟು ಗೌರವ ಪಡೆಯುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.   
 
ಮುಖ್ಯಮಂತ್ರಿಗಳು  ಜನರನ್ನು ಕೇಳುವ ಬದಲಿಗೆ  ಬ್ಲ್ಯೂಫಿಲ್ಮ್ ಬಗ್ಗೆ ತಮ್ಮ ಸಚಿವರನ್ನು ಕೇಳಿದರೆ ಉತ್ತಮವಾಗಿರುತ್ತದೆ. ಸಿಎಂ ಸಿದ್ದರಾಮಯ್ಯನವರು ರಾತ್ರಿಯೆಲ್ಲಾ ಏನು ಮಾಡ್ತಾರೆ? ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದೇಕೆ ಎನ್ನುವುದನ್ನು ಇಡೀ ರಾಜ್ಯದ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಅಥಣಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಲಕ್ಷ್ಮಣ್ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದನ್ನು ಸ್ಮರಿಸಬಹುದು.  
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಿಎಸ್ ಟಿ ಎಫೆಕ್ಟ್: ಬಾಯಿಸುಡುತ್ತಿದೆ ಕಾಫಿ-ಟೀ ಬೆಲೆ