ರಾಯಚೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಂಚರತ್ನ ಯಾತ್ರೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಮುದಗಲ್ ಪಟ್ಟಣದಿಂದ ಆರಂಭವಾಗಿದೆ.
ಈ ವೇಳೆ ಅಲ್ಲಿನ ಕಾರ್ಯಕರ್ತರು ಡೊಳ್ಳಿನ ಹಾರ ಹಾಕಿ ಸನ್ಮಾನಿಸಿದರು. ಹೆಚ್ಡಿಕೆಯನ್ನು ಅದ್ಧೂರಿಯಾಗಿ ಸ್ವಾಗತಿಸಿದ ನೂರಾರು ಕಾರ್ಯಕರ್ತರು ಮುದಗಲ್ನಲ್ಲಿ ಡೊಳ್ಳಿನ ಹಾರ ಹಾಕಿ ಸನ್ಮಾನಿಸಿದರು.
25ಕ್ಕೂ ಹೆಚ್ಚು ಡೊಳ್ಳುಗಳಿಂದ ತಯಾರಿಸಿದ ಬೃಹತ್ ಹಾರ ಹಾಕುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಮೇಲಿನ ಅಭಿಮಾನ ಮೆರೆದರು.