Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಲಷ್ಕರ್-ಎ-ತೊಯಿಬಾ ಉಗ್ರನ ಬಂಧನ

ಮುಂಬೈನಲ್ಲಿ ಲಷ್ಕರ್-ಎ-ತೊಯಿಬಾ ಉಗ್ರನ ಬಂಧನ
ಮುಂಬೈ , ಸೋಮವಾರ, 17 ಜುಲೈ 2017 (17:53 IST)
ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜಾಗತಿಕ ಉಗ್ರಗಾಮಿ ಲಷ್ಕರ್-ಎ-ತೊಯಿಬಾ ಸಂಘಟನೆಯ ಉಗ್ರನನ್ನು ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.   
‪‪
ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ಪೊಲೀಸರು ಸಲೀಂಖಾನ್ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಸುಳಿವು ತಿಳಿದು ದಾಳಿ ನಡೆಸಿ ಲಷ್ಕರ್-ಎ-ತೊಯಿಬಾ ಸಂಘಟನೆಯ ಉಗ್ರ ಸಲೀಂಖಾನ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಅನೇಕ ಉಗ್ರ ದಾಳಿಯಲ್ಲಿ ಪಾಲ್ದೊಂಡಿದ್ದ ಸಲೀಂಖಾನ್ ಬಂಧನಕ್ಕೆ ಸೇನೆ ಮತ್ತು ಪೊಲೀಸ್ ಜಾಲ ಬೀಸಿತ್ತು. ಆದರೆ, ಬಂಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬಂಧನಕ್ಕೊಳಗಾಗಿದ್ದು ಆತನಿಂದ ಮಹತ್ವದ ಮಾಹಿತಿಗಳು ಲಭ್ಯವಾಗಲಿವೆ ಎಂದು ಹಿರಿಯ ಎಟಿಎಸ್ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಪಡೆಗಳ ಗುಂಡಿನ ದಾಳಿ: ಓರ್ವ ಯೋಧ, ಬಾಲಕಿ ಬಲಿ