Select Your Language

Notifications

webdunia
webdunia
webdunia
webdunia

ಭೂ ಹಗರಣ ಆರೋಪ: ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಿಎಂ ಪುತ್ರ ಸಿದ್ದತೆ

ಭೂ ಹಗರಣ ಆರೋಪ: ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಿಎಂ ಪುತ್ರ ಸಿದ್ದತೆ
ಬೆಂಗಳೂರು , ಮಂಗಳವಾರ, 10 ಅಕ್ಟೋಬರ್ 2017 (13:19 IST)
ಮುಖ್ಯಮಂತ್ರಿ ಸಿದ್ದರಾಮಯ್ಯ 300 ಕೋಟಿ ಮೌಲ್ಯದ ಭೂ ಹಗರಣ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಬಿ.ಜಿ.ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಸಿಎಂ ಪುತ್ರ ಯತೀಂದ್ರ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯರವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಮತ್ತು ಚುನಾವಣೆ ಪ್ರಚಾರಕ್ಕಾಗಿ ಯಾವುದೇ ವಿಷಯಗಳಿಲ್ಲವಾದ್ದರಿಂದ ಇಂತಹ ಬೇಜವಾಬ್ದಾರಿ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಕಾವೇರಿ ನಿವಾಸದಲ್ಲಿ ವಕೀಲರೊಂದಿಗೆ ಚರ್ಚೆ ನಡೆಸಿರುವ ಯತೀಂದ್ರ, ಪುಟ್ಟಸ್ವಾಮಿ ಬಿಡುಗಡೆ ಮಾಡಿದ ದಾಖಲೆಗಳ ಸಮೇತ ಕೇಸ್ ದಾಖಲಿಸಲು ಸಿದ್ದತೆ ನಡೆಸುವಂತೆ ವಕೀಲರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬೆಂಗಳೂರಿನ ಉತ್ತರ ಭಾಗದಲ್ಲಿರುವ ಭೂಪಸಂದ್ರದ ಸರ್ವೆ ನಂಬರ್ 20 ಮತ್ತು ಸರ್ವೆ ನಂಬರ್ 21 ರಲ್ಲಿ 6.26 ಎಕರೆ ಭೂಮಿಯ ಮೌಲ್ಯ 300 ಕೋಟಿ ರೂಪಾಯಿಗಳಾಗಿದ್ದು ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಪುಟ್ಟಸ್ವಾಮಿ ಬಾಂಬ್ ಸಿಡಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯರಿಂದ 300 ಕೋಟಿ ಭೂಹಗರಣ: ಬಿ.ಜಿ.ಪುಟ್ಟಸ್ವಾಮಿ