Webdunia - Bharat's app for daily news and videos

Install App

ಗಂಡು ಮರಿಗೆ ಜನ್ಮ ನೀಡಿದ ಗಜಪಡೆಯ ಲಕ್ಷ್ಮಿ

Webdunia
ಬುಧವಾರ, 14 ಸೆಪ್ಟಂಬರ್ 2022 (14:20 IST)
ಮೈಸೂರು : ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರೋ ಗಜಪಡೆಯ ಸದಸ್ಯೆ 22 ವರ್ಷದ ಲಕ್ಷ್ಮಿ ನಿನ್ನೆ(ಮಂಗಳವಾರ) ಗಂಡು ಮರಿಗೆ ಜನ್ಮ ನೀಡಿದೆ.
 
ದಸರಾ ವೇಳೆ ಗಜಪಡೆಯ ಸದಸ್ಯೆ ಮರಿ ಹಾಕುತ್ತಿರುವ ಎರಡನೇ ಪ್ರಸಂಗವಿದು. ಲಕ್ಷ್ಮಿಯ ಪುತ್ರನನ್ನು ಕಂಡು ಗಜಪಡೆಯ ಮಾವುತರು, ಕಾವಾಡಿಗಳು, ಅರಣ್ಯಾಧಿಕಾರಿಗಳು ಖುಷಿಯಾಗಿದ್ದಾರೆ.

15 ವರ್ಷಗಳ ಹಿಂದೆ ದಸರಾ ಗಜಪಡೆಯ ಸದಸ್ಯೆಯಾಗಿ ಬಂದಿದ್ದ ಸರಳ ಆನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಮರಿಗೆ ಚಾಮುಂಡಿ ಎಂದು ಹೆಸರಿಡಲಾಗಿತ್ತು.

ಲಕ್ಷ್ಮಿ ಆನೆ 2017 ರಲ್ಲಿ ಮೊದಲ ಬಾರಿಗೆ ನಾಡಹಬ್ಬದ ಮೆರವಣಿಗೆಗೆ ಕಾಡಿ ನಿಂದ ನಾಡಿಗೆ ಬಂದಿತ್ತು. ಆಗ ಸಿಡಿಮದ್ದಿನ ಶಬ್ದಕ್ಕೆ ಲಕ್ಷ್ಮಿ ಬೆಚ್ಚುತ್ತಿದ್ದ ಕಾರಣ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ.

ಆಗ ವೈದ್ಯರು ಆನೆಯನ್ನು ಪರೀಕ್ಷಿಸಿದ್ದಾಗ ಲಕ್ಷ್ಮಿ ತುಂಬು ಗರ್ಭಿಣಿ ಎಂಬುದು ಗೊತ್ತಾಗಿದೆ. ತಕ್ಷಣ ಲಕ್ಷ್ಮಿಯನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಿನ್ನೆ ರಾತ್ರಿ 8.10ಕ್ಕೆ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಈ ಮರಿಗೆ ಗಣಪತಿ ಎಂದು ನಾಮಕರಣ ಮಾಡಲು ಚಿಂತನೆ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments