Select Your Language

Notifications

webdunia
webdunia
webdunia
webdunia

ಮೈಸೂರಿನಲ್ಲಿ ದಸರಾ ಆಚರಣೆಗೆ ಸಕಲ ಸಿದ್ಧತೆ

ಮೈಸೂರಿನಲ್ಲಿ ದಸರಾ ಆಚರಣೆಗೆ ಸಕಲ ಸಿದ್ಧತೆ
ಮೈಸೂರು , ಶನಿವಾರ, 10 ಸೆಪ್ಟಂಬರ್ 2022 (15:13 IST)
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2022 ಭಾಗವಹಿಸಲು ನೆನ್ನೆ(ಬುಧವಾರ) ಗಜಪಡೆಯ ಎರಡನೇ ತಂಡ ಅರಮನೆಗೆ ಆಗಮಿಸಿದ್ದು, ಸರಳವಾಗಿ ಸ್ವಾಗತವನ್ನು ಕೋರಲಾಗಿದೆ.
 
ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ಗಜಪಡೆ ಸ್ವಾಗತ ಕಾರ್ಯಕ್ರಮ ರದ್ದಾಗಿತ್ತು. ಮೈಸೂರು ತಲುಪಿದ ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿ ತಾಲೀಮು ನಡೆಸಲು ಅವಕಾಶ ಮಾಡಲಾಗೊದೆ.

ಮೊದಲ ತಂಡದ ಆನೆಗಳಿಗೆ ಬನ್ನಿಮಂಟಪದವರೆಗೂ ತಾಲೀಮು ಮಾಡಿದ್ದು, ಸೋಮವಾರದಿಂದ ಅರಮನೆ ಹೊರಗೆ ಶ್ರೀರಾಮ, ವಿಜಯ, ಸುರ್ಗಿವ, ಪಾರ್ಥಸಾರಥಿ ಸೇರಿ ಗೋಪಿ ನೇತೃತ್ವದಲ್ಲಿ 5 ಆನೆಗಳು ತಾಲೀಮು ನಡೆಸಲಿವೆ.

ಶ್ರೀರಾಮ, ಸುರ್ಗೀವ, ಪಾರ್ಥಸಾರಥಿ ಹೊಸ ಆನೆಗಳಾಗಿದ್ದು, ಇಡೀ ದಸರೆಯಲ್ಲಿ ಪಾರ್ಥಸಾರಥಿ ಅತ್ಯಂತ ಚಿಕ್ಕ ವಯಸ್ಸಿನ ಆನೆಯಾಗಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯ ರಾಮಾಪುರ ಆನೆ ಶಿಬಿರದಿಂದ ಚಿಕ್ಕ ವಯಸ್ಸಿನ ಪಾರ್ಥಸಾರಥಿ ಆನೆಯನ್ನು ಕರೆತರಲಾಗಿದ್ದು, ಕೊಡಗಿನ ನಾಗರಹೊಳೆ ರಾಷ್ಟ್ರೀಯ ವ್ಯಾಪ್ತಿಯ ದುಬಾರೆ ಆನೆ ಶಿಬಿರದಿಂದ ಗೋಪಿ, ಶ್ರೀರಾಮ, ವಿಜಯ, ಸುರ್ಗಿವ ಗಜಪಡೆ ಸೇರಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ನುಚ್ಚಕ್ಕಿ ರಫ್ತನ್ನು ನಿಷೇಧಿಸಿದ ಕೇಂದ್ರ!?