ಹಸೆಮಣೆ ಏರಲು ಸಜ್ಜಾದ 'ಲಕ್ಷ್ಮಿ ನಿವಾಸ' ಜಾಹ್ನವಿ, ಚಿನ್ನುಮರಿ ಕೈ ಹಿಡಿಯುವ ಹುಡುಗ ಯಾರು ಗೊತ್ತಾ

Sampriya
ಬುಧವಾರ, 6 ನವೆಂಬರ್ 2024 (18:03 IST)
Photo Courtesy X
ಬಿಗ್‌ಬಾಸ್‌ ಸೀಸನ್ 7ರ ಸ್ಪರ್ಧಿ, ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದಲ್ಲಿ ಜನಮನ್ನಣಗೆ ಗಳಿಸಿರುವ ಚಂದನಾ ಅನಂತಕೃಷ್ಣ ಅವರು ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಇದೇ ತಿಂಗಳ 28ರಂದು ಉದ್ಯಮಿ ಪ್ರತ್ಯಕ್ಷ್‌ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಟಿ ಸಜ್ಜಾಗಿದ್ದಾರೆ.  

ಕುಟುಂಬಸ್ಥರು ನಿಶ್ಚಯಿಸಿದ್ದ ಮದುವೆ ಇದಾಗಿದ್ದು, ಬೆಂಗಳೂರಿನಲ್ಲಿ ಕುಟುಂಬದವರ, ಹಿತೈಸಿಗಳ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಲಿದೆ.

ಉದ್ಯಮಿಯಾಗಿರುವ ಪ್ರತ್ಯಕ್ಷ್‌ ಅವರ ಪೋಷಕರು ಕೂಡಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.  ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ 'ದೇವತಾ ಮನುಷ್ಯ' ಚಿತ್ರದಲ್ಲಿ ನಟಿಸಿದ್ದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

ಕಿರುತೆರೆಯಲ್ಲಿ ದೊಡ್ಡ ಹೆಸರು ಗಳಿಸಿರುವ ಚಂದನಾ ಅವರು ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರು ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರ ಎಲ್ಲರ ಮೆಚ್ಚುಗೆ ಪಡೆದು ಒಳ್ಳೆಯ ಟಿಆರ್‌ಪಿಯೊಂದಿಗೆ ಪ್ರಸಾರವಾಗುತ್ತಿದೆ.

<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ಬಳಿಕ ಮೊದಲ ಬಾರೀ ಒಟ್ಟಿಗೆ ಕಾಣಿಸಿಕೊಂಡ ಸಮಂತಾ- ರಾಜ್‌ ನಿಡಿಮೋರು

ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅನುಮಾನಾಸ್ಪದ ಸಾವು

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ಮುಂದಿನ ಸುದ್ದಿ
Show comments