Select Your Language

Notifications

webdunia
webdunia
webdunia
webdunia

ಗಣಪತಿ ವಿಸರ್ಜನೆಯಲ್ಲಿ ಶಾಸಕಿಯ ಸಖತ್ ಡಾನ್ಸ್

ಗಣಪತಿ ವಿಸರ್ಜನೆಯಲ್ಲಿ ಶಾಸಕಿಯ ಸಖತ್ ಡಾನ್ಸ್
ಉತ್ತರಕನ್ನಡ , ಮಂಗಳವಾರ, 25 ಸೆಪ್ಟಂಬರ್ 2018 (19:33 IST)
ಸಾರ್ವಜನಿಕ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕಿಯೊಬ್ಬರು ಡಿಜೆ ಸೌಂಡಿಗೆ ಸಖತ್ ಹೆಜ್ಜೆ ಹಾಕಿ ಕುಣಿದಿದ್ದಾರೆ.

 ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಾರ್ವಜನಿಕ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಡಿಜೆ ಸೌಂಡಿಗೆ ಸಖತ್ ಹೆಜ್ಜೆ ಹಾಕಿ ಕುಣಿದಿರುವ ವಿಡಿಯೊ ವೈರಲ್ ಆಗಿದೆ.

ಇದು ಸಾರ್ವಜನಿಕ ವಲಯದಲ್ಲಿ ಟೀಕೆಗೆ  ಕಾರಣವಾಗಿದೆ. ಪಡ್ಡೆ ಹುಡುಗ್ರು, ಸೇರಿದಂತೆ ಕುಡಿತದ ಅಮಲಿನಲ್ಲಿ ಕುಣಿಯುತ್ತಿದ್ದವರ ಜೊತೆಯಲ್ಲಿ  ಕುಣಿಯುವ  ಮೂಲಕ ಸ್ಥಳೀಯ ಜನರಲ್ಲಿ ಗಮನಸೆಳೆದ ಶಾಸಕಿ ವಿರುದ್ದ ಟೀಕಾ ಪ್ರಹಾರವಾಗುತ್ತಿದೆ.

ಕಾರವಾರ ತಾಲೂಕಿನ  ಶಿರವಾಡದ ಗಣೇಶ‌ ಮೂರ್ತಿ ವಿಸರ್ಜನಾ ವೇಳೆ ಜನರೊಂದಿಗೆ ನೃತ್ಯ ಮಾಡುವ ಮೂಲಕ ಸ್ಥಳೀಯ ಜನರಿಗೆ ಹುಬ್ಬೇರಿಸುವಂತೆ ಮಾಡಿದ್ರು. ಜನಸಮೂಹದ ನಡುವೆ ಶಾಸಕಿಯ ಕುಣಿತಕ್ಕೆ ಮೆರವಣಿಗೆಯ ನೋಡಲು ಬಂದ ಜನರು ಶಾಸಕಿಯ ಕುಣಿತವನ್ನು ನೋಡುವುದರಲ್ಲಿ ಮುಗಿಬಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಎನ್.ಮಹೇಶ ಕನಸು ಕಾಣುತ್ತಿದ್ದಾರೆ ಎಂದ ಸಚಿವ