Webdunia - Bharat's app for daily news and videos

Install App

ಕುಂಭಮೇಳಕ್ಕೆ ವಯಸ್ಕರು, ಮಕ್ಕಳು ಹೋಗಬಹುದೇ, ಈಗಾಗಲೇ ಹೋಗಿರುವವರ ಸಲಹೆ ನೋಡಿ

Krishnaveni K
ಬುಧವಾರ, 29 ಜನವರಿ 2025 (14:21 IST)
Photo Credit: X
ಪ್ರಯಾಗ್ ರಾಜ್: ಕುಂಭಮೇಳದಲ್ಲಿ ಇಂದು ಕಾಲ್ತುಳಿತದ ವಿಚಾರ ತಿಳಿಯುತ್ತಿದ್ದಂತೇ ಅನೇಕರಲ್ಲಿ ಆತಂಕ ಮನೆ ಮಾಡಿದೆ. ಕುಂಭಮೇಳಕ್ಕೆ ವಯಸ್ಕರು, ಮಕ್ಕಳು ಹೋಗುವುದು ಸುರಕ್ಷಿತವೇ ಎಂಬ ಅನುಮಾನ ಮೂಡಿದೆ. ಅದಕ್ಕೆ ಈಗಾಗಲೇ ಹೋಗಿರುವ ಅನುಭವಿಯೊಬ್ಬರ ಸಲಹೆಗಳನ್ನು ನೋಡಿ.

ಶೋಭಾ ಮಳವಳ್ಳಿ ಎಂಬವರು ಕುಂಭಮೇಳಕ್ಕೆ ಹೋಗಿದ್ದಾರೆ. ಇದೀಗ ಕಾಲ್ತುಳಿತದ ಸುದ್ದಿ ತಿಳಿಯುತ್ತಿದ್ದಂತೇ ತಮ್ಮ ಫೇಸ್ ಬುಕ್ ಮುಖಾಂತರ ಕುಂಭಮೇಳಕ್ಕೆ ಹೋಗಲು ಪ್ಲ್ಯಾನ್ ಮಾಡಿಕೊಂಡಿರುವವರಿಗೆ ಕೆಲವೊಂದು ಸೂಚನೆಗಳನ್ನು, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಸಲಹೆ, ಸೂಚನೆಗಳ ವಿವರ ಇಲ್ಲಿದೆ ನೋಡಿ.

1. ಯಾರು ಬೇಕಾದರೂ ಬರಬಹುದು. ಶಿವರಾತ್ರಿಯೊಳಗೆ. ಜೀವನದಲ್ಲಿ ಒಮ್ಮೆಯಷ್ಟೇ ಅವಕಾಶ ಸಿಗುವಂಥದ್ದು. ಆದರೆ, ಸರಿಯಾದ ಪ್ಲಾನ್ ಮಾಡಬೇಕು.
2. ನೇರವಾಗಿ ಪ್ರಯಾಗ್ ರಾಜ್ ಗೆ ಹೋಗುವುದಾ? ಅಯೋಧ್ಯೆ ಗೆ ನೋಡಿ ಕುಂಭಮೇಳ ತಲುಪುವುದಾ ? ಯೋಚಿಸಿ.
3. ವಿಮಾನ ಪ್ರಯಾಣ ತುಂಬಾ ದುಬಾರಿಯಾಗಿದೆ. ಬೆಂಗಳೂರು ಟು ಪ್ರಯಾಗ್ ರಾಜ್ ನೇರ ವಿಮಾನವಿದೆ. ಇವತ್ತಿನ ಟಿಕೆಟ್‌ದರ 50 ಸಾವಿರ ದಾಟಿದೆ.
ಸದ್ಯಕ್ಕೆ ಫ್ಲೈಟ್ ‌ಟಿಕೆಟ್ ದರ ಇಳಿಯುವ ಸಾಧ್ಯತೆಯೇ ಇಲ್ಲ. ಅಷ್ಟು ಬೇಡಿಕೆ ಇದೆ. ಅದನ್ನೇ ಅಸ್ತ್ರವಾಗಿಸಿಕೊಂಡು, ವಿಮಾನ ಸಂಸ್ಥೆಗಳು ದುಡ್ಡು ‌ದೋಚುತ್ತಿವೆ.
4. ರೈಲಿನಲ್ಲೂ ಟಿಕೆಟ್ ಸಿಗುವುದು ಕಷ್ಟವಿದೆ. ಅಲ್ಲದೇ ರೈಲಿನಲ್ಲಿ ಎರಡು ದಿನ ಬೇಕು. ರೈಲಿನಲ್ಲಿ‌ ಹೋಗುವುದಾದರೂ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು. ಟಿಕೆಟ್ ಸಿಗ್ತಿದೆಯಾ ಚೆಕ್‌ ಮಾಡಿಕೊಳ್ಳಿ.
4. 10 ರಿಂದ‌ 20‌ ಜನ ಸೇರಿ ಟೆಂಪೋ ಟ್ರಾವಲ್ ನಲ್ಲಿ ಬರಬಹುದು. ಆದ್ರೆ ವಿಪರೀತ ‌ವಾಹನ ದಟ್ಟಣೆ ಇದೆ. ಅಲ್ಲದೇ, ಸಿಟಿ ಹೊರಗೆ 10 ರಿಂದ‌ 15 km ದೂರದಲ್ಲೇ ವಾಹನ ನಿಲ್ಲಿಸಿಬಿಡ್ತಾರೆ. ಅಲ್ಲಿಂದ ಆಟೋ ಮಾಡಿಕೊಂಡ‌ ಬರಬೇಕು.
ಆಟೋಗಳು ಹಣ‌ ಸುಲಿಗೆ ಮಾಡುತ್ತಿವೆ.
5. ಅಯೋಧ್ಯೆ, ‌ಪ್ರಯಾಗ್ ರಾಜ್,‌‌ ಕುಂಭಮೇಳ, ಕಾಶಿ ಎಲ್ಲೆಡೆ ಕಾಲ್ನಡಿಗೆಯಲ್ಲೇ ತೆರಳಬೇಕು. ಕನಿಷ್ಠ ‌5 ರಿಂದ 10km , ಅದಕ್ಕೂ ‌ಹೆಚ್ಚು ನಡೆಯಬೇಕಾಗಬಹುದು.
ಮಂಡಿ ನೋವಿರುವವರು ಯೋಚಿಸಿ.
ಮುಖ್ಯವಾಗಿ ವಿಪರೀತ ಚಳಿ‌ ಇದೆ. ಉಸಿರಾಟದ ಸಮಸ್ಯೆ ‌ಇರುವವರಿಗೆ ಬ್ಯಾಡ್ ವೆದರ್.
6. ಊಟ- ತಿಂಡಿ ಬಗ್ಗೆ ‌ಹೆಚ್ಚಿನ ನಿರೀಕ್ಷೆ ಇಟ್ಕೊಬೇಡಿ. ಸಿಕ್ಕಿದ ಕಡೆ ತಿಂದು ಹೊಟ್ಟೆ ತಂಬಿಸಿಕೊಳ್ಳಬೇಕು. ಆದ್ರೆ ಸಿಕ್ಕಿದ್ದೆಲ್ಲ ತಿಂದರೆ‌ ಹೊಟ್ಟೆ ಸಮಸ್ಯೆ. ವಾಂತಿ, ಬೇಧಿ, ಗಂಟಲುನೋವು‌ ಕಾಡಬಹುದು (ಎಲ್ಲರಿಗೂ ಅಲ್ಲ)
ಇಷ್ಟೆಲ್ಲ ‌ಪರಿಸ್ಥಿತಿ ಎದುರಿಸಲು ಸಿದ್ಧ, ಏನಾದರೂ ‌ಸರಿ ಕುಂಭಮೇಳಕ್ಕೆ ಹೋಗೋಣ, ಪುಣ್ಯ ಸ್ನಾನ ಮಾಡೋಣ ಅನ್ನೋದಾದ್ರೆ ಈಗಲೇ ‌ಪ್ಲಾನ್ ಮಾಡಿ, ಹೊರಡಿ..
ಅಷ್ಟಕ್ಕೂ 144 ವರ್ಷಕ್ಕೊಮ್ಮೆ ಬರುವ ಕುಂಭಮೇಳ. ಅನುಭವಿಸಿಯೇ ಸಾಯೋಣ ಅನ್ನಿಸುವಷ್ಟು‌ ರೋಚಕವಾಗಿದೆ..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments