Select Your Language

Notifications

webdunia
webdunia
webdunia
webdunia

ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಎಚ್ಚರಿಕೆ

ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಎಚ್ಚರಿಕೆ
ಬೆಂಗಳೂರು: , ಭಾನುವಾರ, 21 ಮೇ 2017 (14:05 IST)
ಪ್ರಾಮಾಣಿಕವಾಗಿ ತನಿಖೆ ಮಾಡೋದಾದ್ರೆ ಸರಿ. ಇಲ್ಲ ನನಗೆ ತೊಂದರೆ ಕೊಟ್ಟು ಸಂತೋಷ ಪಡಬೇಕು ಎನ್ನುವ ರೀತಿ ತನಿಖೆಗೆ ಮುಂದಾದಲ್ಲಿ ಮುಂದೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
 
 ಮೊದಲನೇಯದಾಗಿ ಜಂತಕಲ್ ಮೈನಿಂಗ್ ಪ್ರಕರಣ ನಡೆದಿಯೇ ಇಲ್ಲ. ಮಾಜಿ ಸಚಿವ ಜನಾರ್ದನ ರೆಡ್ಡಿ ದಾಖಲಾತಿಗಳನ್ನು ತರಲು ವಿಶೇಷ ತನಿಖಾ ತಂಡಕ್ಕೆ ಮೂರು ವಾರಗಳ ಕಾಲ ಸಮಯಾವಕಾಶ ಕೇಳಿದ್ದಾರೆ. ದಾಖಲಾತಿಗಳನ್ನು ಎಲ್ಲಿಂದ ತರುತ್ತಾರೋ ಗೊತ್ತಿಲ್ಲ ಎಂದರು.
 
ಜಂತಕಲ್ ಮೈನಿಂಗ್ ಕೇಸ್ ಹಾಕಿಸಿದ್ದೆ ಯಡಿಯೂರಪ್ಪ. ಈಗ ಸರಕಾರ 150 ಕೋಟಿ ಗಣಕಪ್ಪ ಲಂಚ ಪ್ರಕರಣಕ್ಕೆ ಮರು ಜೀವ ತುಂಬಲು ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
 
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕೇಂದ್ರ ಗುಪ್ತಚರ ವರದಿಗಳು ಬಂದಿವೆ. ಆದ್ದರಿಂದ ನನ್ನ ಇಮೇಜ್‌ಗೆ ಧಕ್ಕೆ ತರಲು ಕೆಲ ದುಷ್ಟಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೌಡಿಶೀಟರ್ ನಾಗ್‌ ಮತ್ತೆ ಎದುರಾದ ಸಂಕಷ್ಟ: ಮತ್ತೆ ಮೂರು ಕೇಸ್ ದಾಖಲು