Select Your Language

Notifications

webdunia
webdunia
webdunia
webdunia

ಕುಮಾರಸ್ವಾಮಿ ಸಿಎಂ: ಚನ್ನಪಟ್ಟಣದಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಕುಮಾರಸ್ವಾಮಿ ಸಿಎಂ: ಚನ್ನಪಟ್ಟಣದಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಬೆಂಗಳೂರು , ಮಂಗಳವಾರ, 22 ಮೇ 2018 (17:17 IST)
ರಾಮನಗರ: ನಾಳೆ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆಯಲ್ಲಿ ಸ್ವಕ್ಷೇತ್ರವಾದ ಚನ್ನಪಟ್ಟಣದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಚನ್ನಪಟ್ಟಣ ತಾಲೂಕು ಬೇವೂರು ಗ್ರಾಮದಲ್ಲಿ ನಾಳಿನ‌ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಸಿಹಿ ತಿಂಡಿ ತಯಾರಿಸುತ್ತಿರುವ ಜೆಡಿಎಸ್ ಕಾರ್ಯಕರ್ತರು ಸಂತೋಷದಿಂದ ಸಿದ್ದತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮಾಜಿ ತಾ.ಪಂಚಾಯತ್ ಸದಸ್ಯ ಹಾಗೂ ಕುಮಾರಸ್ವಾಮಿ ಕಟ್ಟಾಭಿಮಾನಿಯಾಗಿರುವ ಗುರುಕುಮಾರ್, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಸಿಹಿ ವಿತರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯೋತ್ಸವ ಆಚರಣೆಗೆ ಬಿಜೆಪಿ ಶಾಸಕ ರಘುಪತಿ ಭಟ್ ಸಿದ್ದತೆ