Publish Date: Sat, 10 Feb 2018 (09:31 IST)
Updated Date: Sat, 10 Feb 2018 (09:33 IST)
ಬೆಂಗಳೂರು: ವಿಧಾನಸಭೆ ಕಲಾಪಗಳು ಸೋಮವಾರದಿಂದಲೇ ಆರಂಭವಾಗಿದ್ದರೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಳೆದ ಐದೂ ದಿನಗಳೂ ಸದನಕ್ಕೆ ಹಾಜರಾಗಲೇ ಇಲ್ಲ.
ವಿಧಾನಸಭೆ ಕಲಾಪಕ್ಕೆ ಶಾಸಕರ ಕೊರತೆಯಿಂದಾಗಿ ನಿನ್ನೆ ಕಲಾಪ ತಡವಾಗಿ ಆರಂಭವಾಗಿತ್ತು. ಎಲ್ಲಾ ಪಕ್ಷದ ಸದಸ್ಯರೂ ಕಡಿಮೆ ಸಂಖ್ಯೆಯಲ್ಲಿ ಹಾಜರಾಗಿದ್ದರು. ಅದರಲ್ಲೂ ಜೆಡಿಎಸ್ ಪಕ್ಷದ ಪ್ರಮುಖ ನಾಯಕರೇ ಗೈರಾಗಿದ್ದರು.
ಸತತ ಪ್ರವಾಸದಿಂದಾಗಿ ಬಳಲಿಸುವ ಕಾರಣ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರು. ಇದೇ ಕಾರಣಕ್ಕೆ ಕುಮಾರಸ್ವಾಮಿ ಗೈರಾಗಿದ್ದರು ಎಂದು ಜೆಡಿಎಸ್ ಮೂಲಗಳು ಹೇಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ