Publish Date: Tue, 10 Mar 2020 (17:10 IST)
Updated Date: Tue, 10 Mar 2020 (17:12 IST)
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ರಾಜ್ಯದ ಸಚಿವರೊಬ್ಬರು ಟೀಕೆ ಮುಂದುವರಿಸಿದ್ದಾರೆ.
ಕುಮಾರಸ್ವಾಮಿ ಹೇಳಿರುವಂತಹ ಹಗುರ ಮಾತು ಅಥವಾ ತೆವಲು ಭಾಷೆಯನ್ನು ನಾನು ಬಳಸೋದಿಲ್ಲ ಅಂತ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕುಮಾರಸ್ವಾಮಿಯವರಿಗೆ ತೆವಲಿನ ಬಗ್ಗೆ ಸರಿಯಾಗಿಯೇ ಗೊತ್ತಿದೆ ಅನ್ನಿಸುತ್ತಿದೆ. ಜನರು ಕ್ಷೇತ್ರದಿಂದ ಸುಖಾಸುಮ್ಮನೆ ಆಯ್ಕೆ ಮಾಡಿ ತಮ್ಮನ್ನು ಕಳಿಸಿಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡೋದು ಸಿಎಂ ಆಗಿದ್ದಾಗ ಅವರ ಕರ್ತವ್ಯವಾಗಿತ್ತು. ಅವರೇನೂ ದಾರಿಯಲ್ಲಿ ಹೋಗೋರಿಗೆ ಕೊಟ್ಟ ದುಡ್ಡಲ್ಲ ಎಂದಿದ್ದಾರೆ. ಕ್ಷೇತ್ರಕ್ಕೆ ಕೊಟ್ಟ ಹಣವನ್ನು ಹೀಗೆ ಬಾಯಿಗೆ ಬಂದಂಗೆ ಹೇಳುವುದು ಸರಿಯಲ್ಲ ಅಂತ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.