Select Your Language

Notifications

webdunia
webdunia
webdunia
webdunia

ಕುಮಾರಸ್ವಾಮಿಗೆ ಬ್ಯಾಕ್‌ ಮೇಲ್ ಮಾಡುವುದೇ ಕಾಯಕ: ಶಿವಕುಮಾರ್ ಆರೋಪ

Prajwal Revanna Pendrive Case

Sampriya

ಚಿಕ್ಕಮಗಳೂರು , ಬುಧವಾರ, 8 ಮೇ 2024 (15:52 IST)
ಚಿಕ್ಕಮಗಳೂರು: ಎಚ್ ಡಿ ಕುಮಾರಸ್ವಾಮಿ ಅವರೇನು ವಕೀಲರಾ, ನ್ಯಾಯಾಧೀಶರೇ, ಅವರೊಬ್ಬ ಕಿಂಗ್ ಆಫ್ ಬ್ಲಾಕ್ ಮೇಲರ್ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಇಂದು ನಗರದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಪೆನ್‌ಡ್ರೈವ್ ಪ್ರಕರಣದಲ್ಲಿ ಮಾತನಾಡುತ್ತಿರುವ ಕುಮಾರಸ್ವಾಮಿ ಅವರು ಬ್ಲಾಕ್ ಮೇಲರ್ ಎಂದು ಆರೋಪ ಮಾಡಿದರು.

ಅವರಿಗೆ ನನ್ನ ರಾಜೀನಾಮೆ ಬೇಕಂತೆ,‌ ಕೊಡೊಣ. ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಹೆದರಿಸುವುದು, ಮುಗಿಸುವುದೇ ಅವರ ಕೆಲಸವಾಗಿದ್ದು, ಪ್ರಕರಣದ ಬಗ್ಗೆ ಪಾಯಿಂಟ್ ಬೈ ಮಾಹಿತಿ ಇರುವ ಅವರು ನ್ಯಾಯಾಲಯದಲ್ಲಿ ವಾದ ಮಾಡಲಿ ಎಂದು ವ್ಯಂಗ್ಯ ಮಾಡಿದರು.  

ಕುಮಾರಸ್ವಾಮಿಗೆ ನನ್ನ ವಿರುದ್ಧ ಮಾತನಾಡದಿದ್ದರೆ ನಿದ್ರೆ ಬರುವುದಿಲ್ಲ. ಇನ್ನೂ ಸಂತ್ರಸ್ತ ಮಹಿಳೆಯರು ಅವರ ಪಕ್ಷದ ಕಾರ್ಯಕರ್ತರಂತೆ, ಮರ್ಯಾದೆ ಇದ್ದರೆ ಹೋಗಿ ಅವರಿಗೆ ಧೈರ್ಯ ತುಂಬಲಿ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ರಿಸಲ್ಟ್‌ನ್ನು ಇಲ್ಲಿ ಪರಿಶೀಲಿಸಿ