ಕುಕ್ಕೆ ಸುಬ್ರಹ್ಮಣ್ಯ ಬಂದ್; ಕಾರಣ ಏನು?

Webdunia
ಶುಕ್ರವಾರ, 1 ಮಾರ್ಚ್ 2019 (20:44 IST)
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ನರಸಿಂಹಸ್ವಾಮಿ ಮಠದ ತೆಕ್ಕೆಗೆ ತೆಗೆದುಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ವಿರುದ್ಧ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಉಳಿಸುವಂತೆ ಆಗ್ರಹಿಸಿ ಮಾ. 7 ರಂದು ಸುಬ್ರಹ್ಮಣ್ಯ ಬಂದ್ಗೆ ಕರೆ ನೀಡಲಾಗಿದೆ.

ಬಂದ್ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ. ಅಲ್ಲದೆ ಶಾಂತಿಯು ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಯಲಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ್ ಅವರು ಭಕ್ತರ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.

ದೇವಸ್ಥಾನವನ್ನು ಎಂದಿಗೂ ಮಠಕ್ಕೆ ಸೇರಿಸಲು ಬಿಡುವುದಿಲ್ಲ. ರಾಜಕಾರಣಿಗಳು ಮಠಗಳ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದಾರೆ.  ಹಾಗಾಗಿ ಸುಬ್ರಹ್ಮಣ್ಯ ದೇವಸ್ಥಾನವನ್ನು ಮಠಕ್ಕೆ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟವಿಚಾರದಲ್ಲಿ ಯಾವ ರಾಜಕಾರಣಿಗಳು ಧ್ವನಿಎತ್ತುತ್ತಿಲ್ಲ. ಇದು ಅಪಾಯದ ಸಂಕೇತ ಎಂದು ಆರೋಪಿಸಿದರು.

ಮಠದವರು ದೇವಸ್ಥಾನವನ್ನು ವಶಕ್ಕೆ ಪಡೆಯಲು ಹಿಂದೆಯೇ ಯೋಜನೆ ರೂಪಿಸಿದ್ದರು. ಇಂದು ಧರ್ಮದ ಬಗ್ಗೆ ಕಾಳಜಿಯಿರುವ ಯಾವುದೇ ಯತಿಗಳು ಹಣದ ವ್ಯಾಮೋಹಕ್ಕೆ ಬಿದ್ದಿಲ್ಲ. ಸಂಘ ಪರಿಹಾರ ಮಠದ ಪರವಾಗಿಲ್ಲ ಎಂದು ಕಿಶೋರ್ ಶಿರಾಡಿ  ದೂರಿದರು.

ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆಯ ಶಿವರಾಂ ರೈ ಮಾತನಾಡಿ, ಕಾನೂನು ಮತ್ತು ಧರ್ಮದ ತಳಹದಿಯಲ್ಲಿ ಹೋರಾಟ ನಡೆಸಬೇಕಿದೆ ಎಂದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಉತ್ತರಾಧಿಕಾರಿ ಚರ್ಚೆ ಆಮೇಲೆ ಇಟ್ಕೊಳ್ಳಿ, ಮೊದಲು ಅಭಿವೃದ್ಧಿ ಮಾಡಿ: ಎನ್ ರವಿಕುಮಾರ್

ಕೊನೆಗೂ ಯತೀಂದ್ರ ಸಿದ್ದರಾಮಯ್ಯಗೆ ಗುಮ್ಮಿದ ಡಿಕೆ ಶಿವಕುಮಾರ್ ಹೇಳಿದ್ದೇನು

ಪ್ರದೀಪ್ ಈಶ್ವರ್ ಎಚ್ಚರಿಕೆಯಿಂದ ಇರು ಮಗನೇ..: ಪ್ರತಾಪ್ ಸಿಂಹ ವಾರ್ನಿಂಗ್

ಆರ್ ಎಸ್ಎಸ್ ಚಡ್ಡಿ ಲೇವಡಿ ಮಾಡಿದ್ದ ಕಾಂಗ್ರೆಸ್: ಜವಹರಲಾಲ್ ನೆಹರೂ ಫೋಟೋ ರಿಲೀಸ್ ಮಾಡಿದ ಬಿಜೆಪಿ

ಕರ್ನೂಲ್ ಬಸ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಮೋದಿ: ಸಂತಾಪ ಸೂಚಿಸಿದ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments