Select Your Language

Notifications

webdunia
webdunia
webdunia
webdunia

ಸಾರಿಗೆ ನೌಕರರ ಮುಷ್ಕರ: ಒಂದು ದಿನಕ್ಕೆ 21 ಕೋಟಿ ನಷ್ಟ!

ಸಾರಿಗೆ ನೌಕರರ ಮುಷ್ಕರ: ಒಂದು ದಿನಕ್ಕೆ 21 ಕೋಟಿ ನಷ್ಟ!
ಬೆಂಗಳೂರು , ಸೋಮವಾರ, 25 ಜುಲೈ 2016 (13:14 IST)
ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಒಂದು ದಿನದಲ್ಲಿ ಸಾರಿಗೆ ಇಲಾಖೆಗೆ 21 ಕೋಟಿ ನಷ್ಟ ಸಂಭವಿಸುತ್ತದೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ಇನಾಯಕ್ ಬಾಗ್ ಖಾನ್ ತಿಳಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಂಸ್ಥೆ ನೌಕರರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಟ್ಟು 9 ಸಾವಿರ ಬಸ್‌ಗಳು ಸ್ಥಗಿತಗೊಂಡಿದೆ. ಮೆಜೆಸ್ಟಕ್, ಮೈಸೂರು ರಸ್ತೆ ಹಾಗೂ ಸ್ಯಾಟ್‌ಲೈಟ್ ನಿಲ್ದಾಣಗಳಿಂದ ತೆರಳಬೇಕಿದ್ದ 1200 ಬಸ್‌ಗಳ ಸಂಚಾರ ಆರಂಭವಾಗಿಲ್ಲದ ಕಾರಣ ಸಾರಿಗೆ ಇಲಾಖೆಗೆ ಬಾರಿ ನಷ್ಟ ಸಂಭವಿಸುತ್ತಿದೆ ಎಂದು ತಿಳಿಸಿದರು.
 
ಸಾರಿಗೆ ನೌಕರರ ಸಂಘಟನೆಗಳು 35 ಪ್ರತಿಶತ ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿರುವ ಹಿನ್ನೆಲೆಯಲ್ಲಿ ಒಟ್ಟು 56 ಬಸ್‌ಗಳು ಜಖಂಗೊಂಡಿವೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ಇನಾಯಕ್ ಬಾಗ್ ಖಾನ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಮಾ ಕಾಯ್ದೆ ಜಾರಿಗೆ ಸರಕಾರ ಚಿಂತನೆ ನಡೆಸಿಲ್ಲ: ಸಿಎಂ ಸಿದ್ದರಾಮಯ್ಯ