Publish Date: Fri, 27 Apr 2018 (09:09 IST)
Updated Date: Fri, 27 Apr 2018 (09:11 IST)
ಬೆಂಗಳೂರು: ಇನ್ನೇನು ರಜಾ ದಿನಗಳು ಆಗಲೇ ಪ್ರಾರಂಭವಾಗಿದೆ. ಹಾಗೆಂದು ಊರಿಗೆ ತೆರಳಲು ಪ್ಲ್ಯಾನ್ ಮಾಡುತ್ತಿದ್ದ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ದೊಡ್ಡ ಶಾಕ್ ನೀಡಿದೆ.
ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಕೆಎಸ್ ಆರ್ ಟಿಸಿ ಶೇ. 10 ರಷ್ಟು ಪ್ರಯಾಣ ದರ ಹೆಚ್ಚಳ ಮಾಡುತ್ತದೆ. ಆದರೆ ಇದಿಗ ಶೇ. 30 ರಷ್ಟು ಹೆಚ್ಚಳ ಮಾಡಿದ್ದು, ಪ್ರಯಾಣ ದರ ಮುಗಿಲು ಮುಟ್ಟಿದೆ. ಇದರಿಂದ ಕೆಎಸ್ ಆರ್ ಟಿಸಿಗೆ ಕೋಟಿ ಕೋಟಿ ಲಾಭ.
ಆದರೆ ಪ್ರಯಾಣಿಕರು ಮಾತ್ರ ಸಂಕಷ್ಟಪಡುವಂತಾಗಿದೆ. ಕೆಎಸ್ ಆರ್ ಟಿಸಿಯ ಸ್ಲೀಪರ್, ಐರಾವತ, ಮುಂತಾದ ಬಸ್ ಗಳ ಪ್ರಯಾಣ ದರದಲ್ಲಿ ಭಾರೀ ಏರಿಕೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.