ಸಿಗರೇಟ್ ಸೇದುತ್ತಾ ಬಿಂದಾಸ್ ಆಗಿ ಬಸ್ ಚಲಾಯಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ

Sampriya
ಸೋಮವಾರ, 14 ಅಕ್ಟೋಬರ್ 2024 (16:36 IST)
Photo Courtesy X
ಕೊಪ್ಪಳ:  ಚಾಲಕನೊಬ್ಬ ಬಿಂದಾಸ್‌  ಆಗಿ ಸಿಗರೇಟ್ ಸೇದುತ್ತಾ ಕೆಎಸ್‌ಆರ್‌ಟಿಸಿ ಬಸ್ ಚಾಲನೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಕರ್ನಾಟಕದ ದೇವರಾದ ಆಂಜನೇಯಸ್ವಾಮಿ ಚಿತ್ರವನ್ನು ತಕ್ಷಣಕ್ಕೆ ತೆಗೆದು ಹಾಕುವಾಗ ಇಂತಹ ವ್ಯಕ್ತಿಯ ವಿರುದ್ಧ ಯಾವಾಗ ಕ್ರಮ ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್​ಗಳಲ್ಲಿ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಕಲನ ಕರ್ತವ್ಯವಾಗಿದೆ. ಬಸ್ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಆದರೂ ಕೂಡ ನಿಪ್ಪಾಣಿ ಘಟಕದ  ಬಸ್​​​​ ಚಾಲಕ ಧೂಮಪಾನ ಮಾಡುತ್ತ ವಾಹನ ಓಡಿಸಿದ್ದಾನೆ.

ನಿಪ್ಪಾಣಿ ಘಟಕಕ್ಕೆ ಸೇರಿದ ಕೆಎ 23, ಎಫ್ 1045 ನಂಬರ್​ನ ಕೆಎಸ್​ಆರ್​ಟಿಸಿ ಬಸ್​ ಗಂಗಾವತಿಯಿಂದ ಕೋಲ್ಹಾಪುರಕ್ಕೆ ತೆರಳುತ್ತಿತ್ತು.

ಚಾಲಕ ಬೀಡಿ ಸೇದುತ್ತಾ ಬಸ್ ಚಲಾಯಿಸಿದ್ದಾನೆ. ಚಾಲಕ ಧೂಮಪಾನ ಮಾಡುವುದನ್ನು ಅಲ್ಲೇ ಕುಳಿತಿದ್ದ ಪ್ರಯಾಣಿಕ ಮೊಬೈಲ್‌ನಲ್ಲಿ ಸೆರೆಹಿಡಿದ್ದಾನೆ. ಈ ಬಗ್ಗೆ ಪ್ರಯಾಣಿಕರು ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಂತರ್‌ ಮಂತರ್‌ನಲ್ಲಿ ಲಾಠಿಚಾರ್ಜ್‌ ವೇಳೆ ಹೆಣ್ಣುಮಕ್ಕಳನ್ನು ಅಸಭ್ಯವಾಗಿ ಮುಟ್ಟಿಲಾಗಿದೆ: ಬಿಕೆ ಹರಿಪ್ರಸಾದ್

ತನ್ನ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ಹೊಸ ಡಿಮ್ಯಾಂಡ್ ಮುಂದಿಟ್ಟ ಸೋನಮ್ ವಾಂಗ್ಚುಕ್

ಶಿಕ್ಷಣ ಸಚಿವರಾಗಿ ಧರ್ಮೇಂದ್ರ ಪ್ರಧಾನ್ ವಿಫಲ: ರಾಹುಲ್ ಗಾಂಧಿ ಕಿಡಿ

ಸಂಸತ್ ಚಲೋ ವೇಳೆ ಕಾಂಕ್ರೋಚ್‌ಗಳ ಮೇಳೆ ಲಾಠಿಚಾರ್ಚ್‌: ಕೇಂದ್ರ, ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌

ಕಾಂಗ್ರೆಸ್ ಕಚೇರಿಯಿಂದ ಮೊಟ್ಟೆ, ಲಾಂಗ್ ತಂದ ಸಾಕ್ಷಿಗಳಿವೆ: ಆರ್.ಅಶೋಕ್

ಮುಂದಿನ ಸುದ್ದಿ
Show comments