Publish Date: Sat, 26 Aug 2023 (19:00 IST)
Updated Date: Sat, 26 Aug 2023 (17:03 IST)
ಕಂಠ ಪೂರ್ತಿ ಕುಡಿದು ಚಾಲಕ KSRTC ಬಸ್ ಚಲಾಯಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು, ನಿರ್ವಾಹಕ ಅಮಾನತು ಮಾಡಿರುವ ಘಟನೆ ಮೈಸೂರಿನ ಹೆಚ್.ಡಿ ಕೋಟೆಯಿಂದ ಮೈಸೂರಿಗೆ ಹೋಗುತ್ತಿದ್ದ KSRTC ಬಸ್ನಲ್ಲಿ ನಡದಿದೆ. KSRTC ಬಸ್ ಚಾಲಕ ಗೋಪಾಲ ಕೃಷ್ಣ ಅವರನ್ನು ನಿರ್ವಾಹಕ ಪ್ರಕಾಶ್ ಅಮಾನತು ಮಾಡಿದ್ದಾರೆ. ಬಸ್ ಚಲಾಯಿಸಲು ಸಾಧ್ಯವಾಗದೇ ಹ್ಯಾಂಡ್ ಪೋಸ್ಟ್ ಬಳಿ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರಿಗೆ ಆವಾಜ್ ಹಾಕಿದ್ದಾನೆ. ಬಸ್ ಚಲಾವಣೆ ವೇಳೆ ಚಾಲಕನ ನಡವಳಿಕೆಯಿಂದ ಎಚ್ಚೆತ್ತ ಪ್ರಯಾಣಿಕರು ಬಸ್ ನಿಲ್ಲಿಸುತ್ತಿದ್ದಂತೆ ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾವರ್ಜನಿಕರು ಕೇಳುವ ಪ್ರಶ್ನೆಗೆ ಚಾಲಕ ನಾನು ಕೆಲಸಕ್ಕೆ ಬರಲ್ಲ ಅಂದೆ ಎಂದು ಸಾರ್ವಜನಿಕರಿಗೆ ಡ್ರೈವರ್ ಉತ್ತರಿಸಿದ್ದಾನೆ. ಪ್ರಯಾಣಿಕರ ಪ್ರಶ್ನೆಗೆ ಉತ್ತರಿಸಲು ಪರದಾಡಿದ್ದ ಚಾಲಕ ಗೋಪಾಲಕೃಷ್ಣನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಇದರ ಬೆನ್ನಲೆ KSRTC ಡಿಪೋ ಮ್ಯಾನೇಜರ್ ಆದೇಶದಂತೆ KSRTC ಬಸ್ ಚಾಲಕ ಗೋಪಾಲನನ್ನು ಕೃಷ್ಣ ನಿರ್ವಾಹಕ ಪ್ರಕಾಶ್ ಅಮಾನತು ಮಾಡಿದ್ದಾರೆ.