Daily Horoscope
✕

ಚಂದನ್ ಶೆಟ್ಟಿ ಜೊತೆ ಭರ್ಜರಿ ಸ್ಟೆಪ್ ಹಾಕಿದ ಸಚಿವ ಕೃಷ್ಣಭೈರೇಗೌಡ: Video

ಕೃಷ್ಣವೇಣಿ ಕೆ
ಸೋಮವಾರ, 3 ಆಗಸ್ಟ್ 2026 (12:28 IST)
ಬೆಂಗಳೂರು: ರಾಪರ್ ಚಂದನ್ ಶೆಟ್ಟಿ ಜೊತೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡ ಸಚಿವ ಕೃಷ್ಣಭೈರೇಗೌಡ ಭರ್ಜರಿ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ.

ಸಚಿವ ಕೃಷ್ಣಭೈರೇಗೌಡ ತಮ್ಮ ಖಡಕ್ ಕೆಲಸಗಳಿಂದ, ಜನರೊಂದಿಗೆ ಬೆರೆಯುವ ಸರಳ ಗುಣದಿಂದ ಇಷ್ಟು ದಿನ ಗುರುತಿಸಿಕೊಂಡಿದ್ದವರು. ಆದರೆ ಚಂದನ್ ಶೆಟ್ಟಿ ಜೊತೆ ಜಲ ಹಬ್ಬ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡ ಸಚಿವರು ತಮ್ಮ ಇನ್ನೊಂದು ಮುಖವನ್ನು ಜನರಿಗೆ ಪರಿಚಯಿಸಿದ್ದಾರೆ.

ಜಲ ಹಬ್ಬ ಕಾರ್ಯಕ್ರಮದ ಅದ್ಧೂರಿ ವೇದಿಕೆಯಲ್ಲಿ ಚಂದನ್ ಶೆಟ್ಟಿ ‘ಪೊಗರು’ ಹಾಡು ಹಾಡುತ್ತಿದ್ದರು. ತಾವೂ ಕುಣಿದು, ಇತರರನ್ನೂ ಕುಣಿಸಿ ಕಾರ್ಯಕ್ರಮ ಕೊಡುವುದು ಅವರ ಸ್ಟೈಲ್. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರನ್ನೂ ಚಂದನ್ ಶೆಟ್ಟಿ ಸುಮ್ಮನೇ ಕೂರಲು ಬಿಡಲಿಲ್ಲ.

ವೇದಿಕೆಗೆ ಕರೆತಂದು ಪೊಗರು ಹಾಡಿಗೆ ಸ್ಟೆಪ್ಸ್ ಹಾಕಿಸಿದ್ದಾರೆ. ಸಂಕೋಚದಿಂದಲೇ ವೇದಿಕೆಗೆ ಬಂದ ಕೃಷ್ಣಬೈರೇಗೌಡ ಕೊನೆಗೆ ಚಂದನ್ ಹೇಳಿಕೊಟ್ಟಂತೆ ಎರಡು ಸ್ಟೆಪ್ಸ್ ಹಾಕಿ ನೆರೆದಿದ್ದವರನ್ನು ರಂಜಿಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.


 
 
 
 
 
 
 
 
 
 
 
 
 
 
 

A post shared by Krishna Byre Gowda (@krishna_byregowda)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶವನ್ನು ಯಾಕೆ ಹಾಳು ಮಾಡ್ತಿದ್ದೀರಿ.. ದೆಹಲಿ ವಿಮಾನ ನಿಲ್ದಾಣದಲ್ಲಿ ಅಭಿಜಿತ್ ದಿಪ್ಕೆ ತರಾಟೆಗೆ ತೆಗೆದುಕೊಂಡ ಪಬ್ಲಿಕ್ Video

ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲಿದ್ದಾನೆ ಪ್ರಶಾಂತ್ ಆನೆ

ಚಿನ್ನದ ಚೈನ್ ಎಂದುಕೊಂಡು ನಕಲಿ ಚಿನ್ನದ ಸರ ಕದ್ದ ಕಳ್ಳ: ಯುವತಿಯ ರಿಯಾಕ್ಷನ್ ಗೆ ನಗು ಗ್ಯಾರಂಟಿ Video

ಚಿಕನ್ ಖರೀದಿಸುತ್ತಿದ್ದ ವ್ಯಕ್ತಿ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಸಾವು: Viral video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments