Select Your Language

Notifications

webdunia
webdunia
webdunia
webdunia

ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಅಧಿಕಾರ ಸ್ವೀಕರಿಸಿದ ಕೃಷ್ಣ ಭೈರೇಗೌಡ

Minister Krishna Byregowda
ಬೆಂಗಳೂರು: ತನಗೆ ನೀಡಿರುವ ಖಾತೆ ಬಗ್ಗೆ ಸ್ಪಷ್ಟನೆ ಇಲ್ಲದ ಬಗ್ಗೆ ಈಚೆಗೆ ಅಸಮಾಧಾನ ಹೊರಹಾಕಿದ್ದ ಸಚಿವ ಕೃಷ್ಣ ಭೈರೇಗೌಡ ಅವರು ಇದೀಗ  ತಣ್ಣಗಾಗಿದ್ದಾರೆ. ಕೊನೆಗೂ ಬೆಂಗಳೂರು ಅಭಿವೃದ್ಧಿ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೃಷ್ಣಬೈರೇಗೌಡ ಅವರು ಇಂದು ಜಿಬಿಎ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಬಳಿಕ ಐದು ಜಿಬಿಎ ಆಯುಕ್ತರ ಜೊತೆ ಸಭೆ ನಡೆಸಿದರು. ಜಿಬಿಎಯಲ್ಲಿ ಆಗುತ್ತಿರುವ ಪ್ರಗತಿ ಮತ್ತು ಯೋಜನೆಗಳ ಬಗ್ಗೆ ಚರ್ಚೆ ಆಯುಕ್ತರ ಸಭೆಯಲ್ಲಿ ಚರ್ಚಿಸಿದರು.

ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು. ರಸ್ತೆ ಗುಂಡಿಗಳು ಬೀಳುತ್ತಿವೆ. ನಿಮಗೆ ಗುಂಡಿಯಲ್ಲದ ರಸ್ತೆ ಮಾಡೋಕೆ ಆಗಲ್ವಾ. ಒಂದು ಕಡೆ ರಸ್ತೆ ಮಾಡ್ತೀರಾ, ಮತ್ತೊಂದು ಕಡೆ ಗುಂಡಿ ಬೀಳುತ್ತೆ ಯಾಕೆ. ಬೇರೆ ರಾಜ್ಯದಲ್ಲಿ ಈ ಸಮಸ್ಯೆ ಇಲ್ಲ, ಬೆಂಗಳೂರಲ್ಲಿ ಯಾಕೆ ಎಂದು ಪ್ರಶ್ನೆ ಮಾಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ ಪಡೆಯುವ ಹಾಗಿಲ್ಲ: ಕೇಂದ್ರ