Select Your Language

Notifications

webdunia
webdunia
webdunia
webdunia

ಕೆಪಿಎಸ್‌ಸಿ ಮರು ಪರೀಕ್ಷೆ

ಕೆಪಿಎಸ್‌ಸಿ ಮರು ಪರೀಕ್ಷೆ
ಬೆಂಗಳೂರು , ಭಾನುವಾರ, 19 ಡಿಸೆಂಬರ್ 2021 (14:09 IST)
ರೈಲು ವಿಳಂಬದಿಂದಾಗಿ ಡಿಸೆಂಬರ್ 14 ರಂದು ಕರ್ನಾಟಕ ಲೋಕಸೇವಾ ಆಯೋಗ( Karnataka Public Service Commission -KPSC ) ನಡೆಸಿದ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ಗಳ (PWD Assistant Engineer) ಭಾಗ-1 ಪರೀಕ್ಷೆ ತಪ್ಪಿಸಿಕೊಂಡಿದ್ದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಕಾಂಕ್ಷಿಗಳಿಗೆ ಪರೀಕ್ಷೆ ಬರೆಯಲು ಎರಡನೇ ಅವಕಾಶ ಸಿಕ್ಕಿದೆ.ಎರಡು ರೈಲುಗಳಲ್ಲಿ ದೂರದ ಸ್ಥಳಗಳಿಂದ ಬೆಂಗಳೂರಿಗೆ ಬಂದು ಇದೇ ರೀತಿಯ ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡ ಸುಮಾರು 200 ಇತರ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆಯೇ ಎಂಬುದರ ಬಗ್ಗೆ KPSC ಇನ್ನೂ ತಿಳಿಸಿಲ್ಲ.
 
ಈ ಅಭ್ಯರ್ಥಿಗಳು ಕಲಬುರಗಿ, ಬೀದರ್, ರಾಯಚೂರು ಮತ್ತು ಸೇಡಂ ಕಡೆಯಿಂದ ಎರಡು ರೈಲುಗಳಲ್ಲಿ ನಗರಕ್ಕೆ ಬಂದಿದ್ದರು. ಆದರೆ ಯಶವಂತಪುರ ಮತ್ತು ಕೆಎಸ್‌ಆರ್ ರೈಲು ನಿಲ್ದಾಣಗಳಲ್ಲಿ ತಡವಾಗಿ ಬಂದಿಳಿದ ಕಾರಣ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ.
 
ಅಂದು ಯಶವಂತಪುರಕ್ಕೆ ಬೆಳಗ್ಗೆ 7.50ಕ್ಕೆ ಆಗಮಿಸಬೇಕಿದ್ದ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 11.05 ಕ್ಕೆ ಆಗಮಿಸಿತ್ತು. ಇದರಲ್ಲಿ ಬೀದರ್‌ನಿಂದ ಸಿವಿಲ್ ಇಂಜಿನಿಯರಿಂಗ್ ಪದವೀಧರರಾದ ಸಚಿನ್ ಸೇರಿದಂತೆ ಸುಮಾರು 120 ಕೆಪಿಎಸ್‌ಸಿ ಅಭ್ಯರ್ಥಿಗಳು ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಯಾವಾಗ?