ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ , ಕಾರ್ಯಾಧ್ಯಕ್ಷ ಹುದ್ದೆಯ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಮೇಲೆ ರಾಜ್ಯ ಕಾಂಗ್ರೆಸ್ ನಾಯಕರು ಒತ್ತಡವೊಂದನ್ನು ಹೇರುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರದ್ದು ಒಬ್ಬಬ್ಬರದು ಒಂದೊಂದು ದಿಕ್ಕು ಎನ್ನುವಂತಾಗಿದೆ. ಹೀಗಾಗಿ ಎರಡೂ ಬಣದ ನಾಯಕರನ್ನು ಒಟ್ಟಿಗೆ ಕರೆದು ಮಾತನಾಡಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರು ವೇಣುಗೋಪಾಲ್ ಅವರಿಗೆ ಒತ್ತಡ ಹಾಕುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅಲ್ಲದೇ ನಾಯಕರನ್ನು ಕರೆದು ಮಾತನಾಡಿ ಗೊಂದಲ ಬಗೆಹರಿಸದೆ ಕೆಪಿಸಿಸಿ ಅಧ್ಯಕ್ಷ , ಕಾರ್ಯಾಧ್ಯಕ್ಷ ಹೆಸರು ಘೋಷಣೆ ಮಾಡದಂತೆ ರಾಜ್ಯ ನಾಯಕರು ಹೈಕಮಾಂಡ್ ಗೆ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್ ರಾಜ್ಯಕ್ಕೆ ಮತ್ತೊಮ್ಮೆ ವೀಕ್ಷಕರನ್ನು ಕಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.