Select Your Language

Notifications

webdunia
webdunia
webdunia
webdunia

ಅತೃಪ್ತ ಶಾಸಕರ ವಿರುದ್ಧ ಧನಂಜಯ್ ಕುಮಾರ್ ಗರಂ: ಹೈಕಮಾಂಡ್‌ಗೆ ದೂರು

ಅತೃಪ್ತ ಶಾಸಕರ ವಿರುದ್ಧ ಧನಂಜಯ್ ಕುಮಾರ್ ಗರಂ: ಹೈಕಮಾಂಡ್‌ಗೆ ದೂರು
ಬೆಂಗಳೂರು , ಬುಧವಾರ, 29 ಜೂನ್ 2016 (14:35 IST)
ಅಧಿಕಾರವಿಲ್ಲದಾಗ ಅಧಿಕಾರಕ್ಕೆ ಬರಬೇಕು ಎಂದು ಕನಸು ಕಾಣುತ್ತೇವೆ. ಅಧಿಕಾರಕ್ಕೆ ಬಂದ ನಂತರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯರ ನಾಯಕತ್ವ ಬದಲಿಸಬೇಕು ಎಂದು ಕೇಳುವುದು ಯಾವ ನ್ಯಾಯವೆಂದು ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ಕುಮಾರ್ ಗುಡುಗಿದ್ದಾರೆ. 
 
 ರಾಜ್ಯ ಸರಕಾರ ಮೂರು ವರ್ಷಗಳ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ಜನರ ಬಳಿಗೆ ತೆರಳಿ ಸರಕಾರದ ಸಾಧನೆಗಳನ್ನು ವಿವರಿಸಿ ಹೇಳುತ್ತೇವೆ ಎಂದು ತಿಳಿಸಿದ್ದಾರೆ.
 
ನಾವು ಅತೃಪ್ತರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಹೈಕಮಾಂಡ್‌ಗೆ ದೂರು ನೀಡುತ್ತೇವೆ. ಅಧಿಕಾರ ಇರುವಾಗ ಸುಮ್ಮನಿದ್ದ ಅತೃಪ್ತರು ಅಧಿಕಾರ ಹೊದ ಕೂಡಲೇ ಭಿುನ್ನಮತ ತೋರುತ್ತಿದ್ದಾರೆ. ಸಮಸ್ಯೆಗಳಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ಪ್ರತಿಯೊಬ್ಬರಿಗೂ ಲಕ್ಷಣ ರೇಖೆ ಇರುತ್ತದೆ. ಅದನ್ನು ಯಾರೊಬ್ಬರು ದಾಟಬಾರದು ಎಂದು ಸಲಹೆ ನೀಡಿದರು.
 
ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಧನಂಜಯ್ ಕುಮಾರ್, ಬಿಜೆಪಿಯಲ್ಲಿಯೇ ಭಿನ್ನಮತ ಕಾಡುತ್ತಿದ್ದು ಅದನ್ನು ಸರಿಪಡಿಸಿಕೊಳ್ಳುವುದು ಬಿಟ್ಟು ಕಾಂಗ್ರೆಸ್ ಪಕ್ಷದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಪ್ರಧಾನಿ ಮೋದಿ ಬೆನ್ನಿಗಿರುತ್ತೇನೆ: ಸ್ವಾಮಿ