Select Your Language

Notifications

webdunia
webdunia
webdunia
webdunia

ಕೊಲ್ಲೂರು ದೇವಾಲಯದ ಊಟ ಕಾಂಗ್ರೆಸ್ ಸಮಾವೇಶಕ್ಕೆ!

ಕೊಲ್ಲೂರು ದೇವಾಲಯದ ಊಟ ಕಾಂಗ್ರೆಸ್ ಸಮಾವೇಶಕ್ಕೆ!
ಮಂಗಳೂರು , ಮಂಗಳವಾರ, 9 ಜನವರಿ 2018 (09:44 IST)
ಮಂಗಳೂರು: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಬಿಸಿಯೂಟವನ್ನು ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಸಾಧನಾ ಸಮಾವೇಶದಲ್ಲಿ ಪೂರೈಸಿದ್ದು ಇದೀಗ ವಿವಾದಕ್ಕೆ ಗುರಿಯಾಗಿದೆ.
 

ಕಲ್ಲಡ್ಕದ ಖಾಸಗಿ ಶಾಲೆಗೆ ಮೂಕಾಂಬಿಕಾ ದೇವಾಲಯದ ಊಟವನ್ನು ಬಿಸಿಯೂಟಕ್ಕೆ ಸರಬರಾಜು ಮಾಡುವುದನ್ನು ತಡೆಹಿಡಿದ ಸರ್ಕಾರ ಇದೀಗ ತನ್ನ ಸಾಧನಾ ಸಮಾವೇಶಕ್ಕೆ ದೇವಾಲಯದ ಊಟ ತರಿಸಿಕೊಂಡಿದ್ದು ಸರಿಯೇ ಎಂಬುದು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಬಿಜೆಪಿ, ಹಿಂದೂ ಪರ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಊಟ ಸರಬರಾಜಾಗುತ್ತಿರುವ ಫೋಟೋಗಳನ್ನು ಪ್ರಕಟಿಸಿದೆ. ಆದರೆ ಮೂಕಾಂಬಿಕಾ ದೇವಾಲಯದ ಟ್ರಸ್ಟ್ ಅಧಿಕಾರಿಗಳು ಸರ್ಕಾರದ ಸಮಾವೇಶಕ್ಕೆ ದೇವಾಲಯದ ಊಟ ನೀಡಿದರೆ ತಪ್ಪಿಲ್ಲ. ಇದಕ್ಕಾಗಿ ದೇವಾಲಯಕ್ಕೆ 1 ಲಕ್ಷ ರೂ. ಪಾವತಿ ಮಾಡಲಾಗಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಿದ್ದರೂ ಇದು ವಿವಾದ ಸ್ವರೂಪ ಪಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ