Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಶಾಸಕನ ಮನೆಯಲ್ಲಿ ಸಿಕ್ಕಿದ ಹಣವೆಷ್ಟು ಗೊತ್ತೇ?

ಕಾಂಗ್ರೆಸ್ ಶಾಸಕನ ಮನೆಯಲ್ಲಿ ಸಿಕ್ಕಿದ ಹಣವೆಷ್ಟು ಗೊತ್ತೇ?
Bangalore , ಭಾನುವಾರ, 12 ಫೆಬ್ರವರಿ 2017 (12:04 IST)
ಬೆಂಗಳೂರು: ನಾನು ಅಮಾಯಕ. ವಿರೋಧಿಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎನ್ನುತ್ತಲೇ ಇದ್ದ ರಾಜ್ಯ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಮನೆಯಲ್ಲಿ ಸಿಕ್ಕಿದ ನೋಟುಗಳ ಕಂತೆ ಎಷ್ಟು ಗೊತ್ತಾ?
 

ಬರೋಬ್ಬರಿ 120 ಕೋಟಿ ರೂ.! ಮೊನ್ನೆ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ನಾಗರಾಜ್ ಮನೆಗೆ ಏಕಾಏಕಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರು. ತೆರಿಗೆ ಬಾಕಿ ಹಾಗೂ ಅಕ್ರಮ ಆಸ್ಥಿ ಹೊಂದಿದ್ದಾರೆಂಬ ಅನುಮಾನದ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ನೋಟುಗಳ ಕಂತೆಯೇ ಸಿಕ್ಕಿದೆ.

ಸುಮಾರು 1.10 ಕೋಟಿ ರೂ. ನಗದು ಸೇರಿದಂತೆ 120 ಕೋಟಿ ರೂ. ಮೌಲ್ಯದ ಅಕ್ರಮ ಆಸ್ಥಿ ವಶಪಡಿಸಿಕೊಳ್ಳಲಾಗಿದೆ. ಜತೆಗೆ 10 ಕೆ.ಜಿ. ಚಿನ್ನವೂ ದೊರಕಿದೆ. ಶಾಸಕ ನಾಗರಾಜ್, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯವಹಾಗಳಲ್ಲೂ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕಾಂಗ್ರೆಸ್  ನ ಬಹುತೇಕ ಸದಸ್ಯರು ಅಕ್ರಮ ಗಳಿಕೆ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಕಾರ್ಯಕಾರಣಿ ಸಭೆ ಆರಂಭ