ಬೆಂಗಳೂರು : ಹಳೆಯ ಮೈಸೂರು ರಸ್ತೆ ಕಿರಿದಾಯ್ತು ಎಂದು 8 ಪಥಗಳ ಹೊಸ ಹೆದ್ದಾರಿ ನಿರ್ಮಾಣವಾಗಿದೆ. ಹಿಂದೆ ಹಳೆ ಹೆದ್ದಾರಿಯಲ್ಲಿ ವೀಕೆಂಡ್ ಬಂತು ಎಂದರೆ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.
ಇದೀಗ ಹಳೆ ಹೆದ್ದಾರಿಯಂತೆ ಹೊಸ ಹೆದ್ದಾರಿಯಲ್ಲೂ ಟ್ರಾಫಿಕ್ ಜಾಮ್ ಆಗಿದೆ. ಹೌದು, ಭಾನುವಾರ ಸಂಜೆ 6 ಗಂಟೆ ವೇಳೆಗೆ ಶ್ರೀರಂಗಪಟ್ಟಣದಿಂದ ಮಂಡ್ಯ ನಡುವಿನ ಹೆದ್ದಾರಿಯಲ್ಲಿ ಕಿಮೀ ಗಟ್ಟಲೆ ಟ್ರಾಫಿಕ್ ಬಿಸಿ ಉಂಟಾಗಿದೆ. ಭಾನುವಾರ ಸಂಜೆ ವೇಳೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸವಾರರು ತಮ್ಮ ವಾಹನಗಳಲ್ಲೇ ಕಾಲ ಕಳೆದಿದ್ದಾರೆ.
2 ಕಿಮೀ ಗೂ ಹೆಚ್ಚು ಉದ್ದದ ಟ್ರಾಫಿಕ್ ನಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ್ದಾರೆ. ಹೊಸ ಹೆದ್ದಾರಿಯಲ್ಲಿ ಟ್ರಾಫಿಕ್ಗೆ ಸಿಲುಕಿ ಜನರು ಹೈರಾಣಾಗಿದ್ದಾರೆ.