ಕೆ ಎಲ್ ಎಸ್ ಸಂಸ್ಥಾಪನಾ ದಿನ ಅದ್ಧೂರಿ ಆಚರಣೆ

Webdunia
ಶನಿವಾರ, 14 ಸೆಪ್ಟಂಬರ್ 2019 (15:44 IST)
ಕೆಎಲ್ ಎಸ್ ಸಂಸ್ಥೆಯ 29ನೇ ಸಂಸ್ಥಾಪನಾ ದಿನಾಚಾರಣೆಯನ್ನು ಸೆ.16 ರಂದು ಐಎಂಇಆರ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಅತುಲ್ ದೇಶಪಾಂಡೆ ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ವಿಶೇಷವಾಗಿ ಕರ್ನಾಟಕ ಕಾನೂನು ಸಂಸ್ಥೆ ಪ್ರಗತಿಗಾಗಿ ಉದ್ಯಮಿ ರಾವಸಾಹೇಬ ಗೋಗಟೆ ಕೊಡುಗೆ ಸ್ಮರಿಸಿ ಅವರ ಜನ್ಮದಿನದಂದೇ ಕೆಎಲ್ಎಸ್ ಸಂಸ್ಥಾಪನಾ ದಿನಾಚಾರಣೆ ಆಚರಿಸಲಾಗುತ್ತಿದೆ. ಈ ಭಾಗದ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು, ಉದ್ಯಮಿಗಳು ಪ್ರತಿ ವರ್ಷ ಎದುರು ನೋಡುವ ಕಾರ್ಯಕ್ರಮ ಇದಾಗಿದೆ. ಈ ಸಂದರ್ಭದಲ್ಲಿ ಉದ್ಯಮದ ಬೆಳವಣಿಗೆಗಾಗಿ ಸ್ಥಳೀಯ ಸಾಧಕ ಉದ್ಯಮಿಯೊಬ್ಬರನ್ನು ಸನ್ಮಾಸಿ ಗೌರವಿಸಲಾಗುತ್ತಿದೆ ಎಂದಿದ್ದಾರೆ.

ಕೆಎಲ್ ಎಸ್ ಸಂಸ್ಥಾಪನಾ ದಿನಾಚಾರಣೆಯ ಅಂಗವಾಗಿ ಸೆ.15 ಸಂಜೆ 6 ಕ್ಕೆ ಐಎಂಇಆರ್ ಸಭಾಂಗಣದಲ್ಲಿ ಪುಣೆಯ ಪಂ‌ಡಿತ್ ಸುಹಾಸ್ ವ್ಯಾಸ್ ಅವರ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಎಂ.ಆರ್.ಕುಲಕರ್ಣಿ ಅಧ್ಯಕ್ಷತೆ ವಹಿಸುವರು, ಪುಣೆಯ ಅತ್ಯಾಸಾ ಕನ್ಸಲ್ಟಿಂಗ್ ಪ್ರೈ.ಲಿ. ಸಂಸ್ಥಾಪಕ, ನಿರ್ದೇಶಕ ನಿಕೇತ ಕಾರಜಗಿ ಮುಖ್ಯ ಅತಿಥಿಗಳಾಗಿ ಗೋಗಟೆ ಸಂಸ್ಥೆಯ ಪರಿವಾರದವರು ಆಗಮಿಸಲಿದ್ದಾರೆ ಎಂದಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments