Select Your Language

Notifications

webdunia
webdunia
webdunia
webdunia

7 ತಿಂಗಳಿಂದ ನಾಪತ್ತೆಯಾಗಿದ್ದಾಳೆ ಸರ್ವಾಧಿಕಾರಿ ಕಿಮ್ ಜಾಂಗ್ ಪತ್ನಿ

Kim Jong-uns wife
ಉತ್ತರ ಕೊರಿಯಾ , ಬುಧವಾರ, 2 ನವೆಂಬರ್ 2016 (18:22 IST)
ವಿಲಕ್ಷಣ, ಪ್ರಜಾಪೀಡಕ ಕಾನೂನುಗಳಿಂದಲೇ ಸದಾ ಸುದ್ದಿಯಾದುವ ಉತ್ತರ ಕೊರಿಯಾದ ವಿವಾದಾತ್ಮಕ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪತ್ನಿ ನಾಪತ್ತೆಯಾಗಿದ್ದಾಳಂತೆ. ಕಳೆದ 7 ತಿಂಗಳಿಂದ ಆಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 
ಕಳೆದ ಮಾರ್ಚ್ 28 ರಂದು ಆಕೆ ಕೊನೆಯ ಬಾರಿ ಪತಿಯ ಜತೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಳು. 
ಹೊಸ ವಾಣಿಜ್ಯ ನಗರ ಪ್ಯೊಂಗ್ಯಾಂಗ್‌ಗೆ ಭೇಟಿ ನೀಡಿದ ಬಳಿಕ ಕಿಮ್ ಪತ್ನಿ ರಿ-ಸೋಲ್ ಜುವನ್ನು ಮತ್ತೆ ನೋಡಿದವರಿಲ್ಲ. 
 
ಆಕೆಯ ನಾಪತ್ತೆ ಹಿಂದೆ ಹಲವು ವದಂತಿಗಳು ಹರಿದಾಡುತ್ತಿವೆ. ಕಿಮ್ ಸಹೋದರಿ ಮತ್ತು ಪತ್ನಿ ಸಂಬಂಧ ಚೆನ್ನಾಗಿರಲಿಲ್ಲ. ಆಕೆಯ ನಾಪತ್ತೆ ಹಿಂದೆ ಅವಳದೇ ಕೈವಾಡವಿದೆ. ಕಿಮ್ ಪತ್ನಿಯನ್ನು ಕೊಂದಿರಬಹುದು, ಹೀಗೆ ವಿವಿಧ ಚರ್ಚೆಗಳು ನಡೆಯುತ್ತಿವೆ. 
 
ಮತ್ತೆ ಕೆಲವರು ಕಿಮ್ ಗರ್ಭಿಣಿಯಾಗಿರಬಹುದು ಎನ್ನುತ್ತಿದ್ದಾರೆ. 
 
ಈ ರೀತಿ ಕಿಮ್ ಪತ್ನಿ ನಾಪತ್ತೆಯಾಗುತ್ತಿರುವುದು ಇದೇ ಮೊದಲಲ್ಲ. 2012ರಲ್ಲೂ ಹೀಗೆ ಆಕೆ ಹಲವು ತಿಂಗಳು ಕಾಣದಾಗಿದ್ದಳು. ಆಕೆ ತಾಯಿಯಾದ ಸುದ್ದಿ ಬಹಿರಂಗವಾದಾಗಲೇ ಆಕೆಯ ನಾಪತ್ತೆ ಹಿಂದಿನ ರಹಸ್ಯ ಹೊರಬಿದ್ದಿತ್ತು. ಮತ್ತೀಗ ಆಕೆಗೆ ಏನಾಗಿದೆ ಎಂಬುದು ರಹಸ್ಯವಾಗಿಯೇ ಉಳಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಲಾಡ್ಜ್‌ನಲ್ಲಿ ನೇಣಿಗೆ ಶರಣಾದ ಪ್ರೇಮಿಗಳು