Webdunia - Bharat's app for daily news and videos

Install App

ಅಪಹರಿಸಿ, ನಗ್ನಗೊಳಿಸಿ ವೀಡಿಯೋ ಮಾಡಿ ಬ್ಲಾಕ್ ಮೇಲ್

Webdunia
ಭಾನುವಾರ, 18 ಸೆಪ್ಟಂಬರ್ 2022 (16:31 IST)
ಪೊಲೀಸರು ಎಂದು ಹೇಳಿಕೊಂಡು ಶ್ರೀಮಂತರನ್ನೇ ಅಹಪರಿಸುತ್ತಿದ್ದ ಖತರ್​​ನಾಕ್​ ಕಿಡ್ನ್ಯಾಪರ್ಸ್ ಕೊನೆಗೂ ಅಸಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಬಂಧನಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ವಸಂತ ಶಿವರೆಡ್ಡಿ ಎಂಬವರನ್ನು ಅಪಹರಿಸಿದ್ದ ಆರೋಪಿಗಳು, 50 ಲಕ್ಷ ರೂ. ವಸೂಲಿ ಮಾಡಿದ್ದರು. ವಸಂತ, ಶಿವರೆಡ್ಡಿಗೆ ಹೈದರಾಬಾದ್​ಗೆ ಕಾರ್ಯನಿಮಿತ್ತ ಹೋಗಿದ್ದಾಗ ಅಲ್ಲಿನ ಹರೀಶ್ ಎಂಬಾತನ ಪರಿಚಯ‌ ಆಗಿತ್ತು. ಜಮೀನು ವಿಚಾರವಾಗಿ ಇವರು ಆರೋಪಿಯನ್ನು ಪರಿಚಯ ಮಾಡಿಕೊಂಡಿದ್ದರು.
 
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಹರೀಶ್, ಕಡಿಮೆ ದರದಲ್ಲಿ ಜಮೀನಿದೆ, ಅದರ ಬಗ್ಗೆ ಮಾತನಾಡಬೇಕು ಎಂಬುದಾಗಿ ಹೇಳಿ ವಸಂತ, ಶಿವರೆಡ್ಡಿ ಅವರನ್ನು ಕರೆಸಿಕೊಂಡಿದ್ದ. ದೇವನಹಳ್ಳಿ ಕಡೆಗೆ ಕರೆಸಿಕೊಂಡು, ನಂತರ ಹೈದರಾಬಾದ್ ಕಡೆಗೆ ಕರೆದೊಯ್ದು ಅಪಹರಣ ಮಾಡಿದ್ದರು.
 
ಅಪಹರಣದ ಬಳಿಕ ಶಿವರೆಡ್ಡಿಯನ್ನ ನಗ್ನಗೊಳಿಸಿ, ವಿಡಿಯೋ ಮಾಡಿ 50 ಲಕ್ಷ ರೂ. ಕೊಡುವಂತೆ ತಾಕೀತು ಮಾಡಿದ್ದರು. ಹಣ ತರುವಂತೆ ವಸಂತಳನ್ನ ಬೆಂಗಳೂರಿಗೆ ಕಳಿಸಿದ್ದರಿಂದ, ಆಕೆ ಸಾಲ ಮಾಡಿ ಹನ್ನೊಂದು ಲಕ್ಷ ರೂ. ಸಮೇತ ಹೈದರಾಬಾದ್​ಗೆ ಹೋಗಿ ಆರೋಪಿಗಳಿಗೆ ನೀಡಿದ್ದಳು. ನಂತರ ಅವರು ಇಬ್ಬರನ್ನೂ ಬಿಟ್ಟು ಕಳಿಸಿದ್ದರು. ಈ ಸಂಬಂಧ ಅವರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
 
ಹೈದರಾಬಾದ್​ನ ಜುಬಿಲಿ ಹಿಲ್ಸ್ ಕ್ಲಬ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳ ಬಳಿ ಪೊಲೀಸ್ ಎಂಬ ಕುರಿತು ನಕಲಿ ಐ.ಡಿ. ಕಾರ್ಡ್​​ಗಳು ಪತ್ತೆಯಾಗಿವೆ. ಆರೋಪಿಗಳಣು ಶಾಸಕ ಅಭ್ಯರ್ಥಿಯೊಬ್ಬರನ್ನೂ ಕಿಡ್ನಾಪ್‌ ಮಾಡಿದ್ದರೆನ್ನಲಾಗಿದ್ದು, ಅವರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ