Webdunia - Bharat's app for daily news and videos

Install App

ತುಳುವಿನಲ್ಲಿ ಮಾತನಾಡಿ ತುಳುವರ ಮನಗೆದ್ದ ಕಿಚ್ಚ ಸುದೀಪ್

Krishnaveni K
ಮಂಗಳವಾರ, 28 ಮೇ 2024 (11:07 IST)
Photo Credit: X
ಮಂಗಳೂರು: ಕರಾವಳಿ ನಾಡು ಮಂಗಳೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಕಿಚ್ಚ ಸುದೀಪ್ ತುಳುವಿನಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್ ತುಳುವಿನ ನಂಟಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ತಾಯಿ ಮಂಗಳೂರಿನವರು. ಹೀಗಾಗಿ ನಾನು ಈ ಊರಿಗೆ ಹೊರಗಿನವಲ್ಲ ಎಂದಿದ್ದಾರೆ.

ನನ್ನ ತಾಯಿ ಮಂಗಳೂರಿನವರು. ನನ್ನ ತಂದೆಗೆ ಊರೆಲ್ಲಾ ಸುತ್ತಿದರೂ ಕೊನೆಗೆ ಮಂಗಳೂರಿನ ಹುಡುಗಿಯೇ ಇಷ್ಟವಾದು ನೋಡಿ. ನನ್ನ ತಾಯಿ ಚೆನ್ನಾಗಿ ತುಳು ಮಾತನಾಡುತ್ತಾರೆ. ಮುಂದಿನ ಸಲ ಅವರನ್ನೇ ಕಳುಹಿಸುತ್ತೇನೆ. ಆದರೆ ನನಗೆ ಅವರು ಹೇಳಿಕೊಟ್ಟಿದ್ದು ಎರಡೇ ಪದ. ‘ಎಂಬ ಉಲ್ಲಾರ್? ಒಣಸಾಂಡ’ ಎಂದಷ್ಟೇ ನನಗೆ ಕಲಿಸಿರುವುದು ಎಂದಿದ್ದಾರೆ.

ವೇದಿಕೆಯ ಮೇಲೆ ಕರಾವಳಿ ಕಲೆಯನ್ನು ನೋಡಿ ಕ್ಲೀನ್ ಬೋಲ್ಡ್ ಆದ ಕಿಚ್ಚ ಸುದೀಪ್, ನನಗೆ ಈ ಜನ್ಮದಲ್ಲಿ ಆ ರೀತಿ ಸುತ್ತಕ್ಕಾಗಲ್ಲ. ಹೊರಗಡೆ ಜನ ನನ್ನನ್ನು ಪ್ರೀತಿಯಿಂದ ಬಾದ್ ಶಹಾ, ಅಭಿನಯ ಚಕ್ರವರ್ತಿ ಎಂದು ಏನೇ ಹೇಳಬಹುದು. ಆದರೆ ಇಂತಹ ಪ್ರತಿಭಾವಂತರನ್ನು ನೋಡಿದಾಗ ನಾವು ತುಂಬಾ ಚಿಕ್ಕವರು ಎನಿಸುತ್ತದೆ ಎಂದು ಹಾಡಿ ಹೊಗಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೌರ ಕಾರ್ಮಿಕರ ವಿಚಾರದಲ್ಲಿ ದಿಟ್ಟ ಹೆಜ್ಜೆಯಿಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ

Karavali Rain: ಬಿಸಿಲ ಬೇಗೆಗೆ ಸುಸ್ತಾಗಿದ್ದ ಮಂದಿಗೆ ಊಹಿಸಲಾಗದ ರೀತಿಯಲ್ಲಿ ಸುರಿದ ಮಳೆ

Pak, India Live: ದಾಳಿ ಬಳಿಕ ಮೊದಲ ಭಾಷಣ ಮಾಡಲಿರುವ ಪ್ರಧಾನಿ ಮೋದಿ, ಹೆಚ್ಚಿದ ಕುತೂಹಲ

ರಸ್ತೆ ವಿವಾದ: ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಗ್ರಾ.ಪಂ ಉಪಾಧ್ಯಕ್ಷ ಬಿಜೆಪಿಯಿಂದ ಅಮಾನತು

Virat Kohli: ಭಾರತೀಯ ಸೇನೆಯ ಸುದ್ದಿಗೋಷ್ಠಿಯಲ್ಲೂ ವಿರಾಟ್ ಕೊಹ್ಲಿಯದ್ದೇ ಹವಾ

ಮುಂದಿನ ಸುದ್ದಿ
Show comments