Select Your Language

Notifications

webdunia
webdunia
webdunia
webdunia

ಖತರ್ನಾಕ್​ ಕಳ್ಳ ಅಂದರ್​

Khatarnak thief Andar
bangalore , ಗುರುವಾರ, 20 ಅಕ್ಟೋಬರ್ 2022 (21:11 IST)
ಕಂಡವರ ಮನೆಗೆ ಕನ್ನಹಾಕಿ, ಉಳಿದ ಹಣವನ್ನು ಧಾರ್ಮಿಕ ಕೇಂದ್ರಗಳಿಗೆ ದಾನ ಮಾಡುತ್ತಿದ್ದ ವಿಚಿತ್ರ ಕಳ್ಳನನ್ನು ಬೆಂಗಳೂರಿನ ಮಡಿವಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಾನ್ ಮೆಲ್ವಿನ್ ಬಂಧಿತ ಆರೋಪಿಯಾಗಿದ್ದಾನೆ. ಈ ಪುಣ್ಯಾತ್ಮ ಐಷಾರಾಮಿ ಲೈಫ್, ಬ್ರ್ಯಾಂಡೆಡ್ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ, ಆಸೆ ತೀರಿ ಉಳಿದ ಹಣದಲ್ಲಿ ಚರ್ಚ್, ದೇವಾಲಯಗಳ ಹುಂಡಿಗೆ ಹಣ ಹಾಕುವುದು, ಹಾಗೂ ದಾನ ಮಾಡುವ ಕಾಯಕ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ಸತ್ಯ ಬಯಲಾಗಿದೆ. ಈತನ ವಿರುದ್ಧ ಬರೋಬ್ಬರಿ ಐವತ್ತಕ್ಕೂ ಅಧಿಕ‌ ಪ್ರಕರಣಗಳು ದಾಖಲಾಗಿವೆ. ಪೀಣ್ಯಾ, ವಿಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಸೇರಿದಂತೆ ವಿವಿಧೆಡೆ ಪ್ರಕರಣಗಳಿದ್ದವು. ನಗರದ ಅತೀ ಹಳೆಯ ಮನೆಗಳ್ಳರಲ್ಲಿ ಮೆಲ್ವಿನ್ ಕೂಡಾ ಒಬ್ಬನಾಗಿದ್ದು. ಮೆಲ್ವಿನ್ ಪ್ರತೀ ಬಾರಿ‌ ಬಂಧನವಾಗಲೂ 10-15 ದಿನಗಳಲ್ಲೇ ಜಾಮೀನು ಪಡೆಯುತ್ತಿದ್ದ. ಈ ಸಂಬಂಧ ಮಡಿವಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನಾಂಬ ದರ್ಶನಕ್ಕೆ ಜನಸಾಗರ