Publish Date: Sat, 15 Apr 2017 (10:46 IST)
Updated Date: Sat, 15 Apr 2017 (10:48 IST)
ಬೆಂಗಳೂರು: ಉಪಚುನಾವಣೆ ಗೆಲುವಿನ ಸಂಭ್ರಮದಲ್ಲಿರುವ ರಾಜ್ಯ ಕಾಂಗ್ರೆಸ್ ಗೆ ನೂತನ ಸಾರಥಿ ಯಾರು ಎಂದು ಇಂದು ಗೊತ್ತಾಗಲಿದೆ. ಹೈಕಮಾಂಡ್ ಜತೆ ಇಂದು ಸಭೆ ನಡೆಯಲಿದ್ದು, ಹೊಸ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಾಗಲಿದೆ.
ಗೃಹಸಚಿವ ಹಾಗೂ ಹಾಲಿ ಅಧ್ಯಕ್ಷ ಪರಮೇಶ್ವರ್ ಸ್ಥಾನಕ್ಕೆ ಹೊಸಬರು ಬರಲಿದ್ದಾರೆ. ಈ ಪೈಕಿ ಡಿಕೆ ಶಿವಕುಮಾರ್ ಅಧ್ಯಕ್ಷನಾಗಲು ಒಲ್ಲೆನೆಂದಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಟ್ಟುಕೊಂಡು ಪ್ರಬಲ ನಾಯಕನ ಹುಡುಕಾಟ ನಡೆದಿದೆ.
ಮೂಲಗಳ ಪ್ರಕಾರ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದೆ. ಏನೇ ಆದರೂ ಇಂದು ನಡೆಯಲಿರುವ ಸಭೆಯಲ್ಲಿ ಸ್ಪಷ್ಟ ಸಂದೇಶ ಹೊರಬೀಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ