Select Your Language

Notifications

webdunia
webdunia
webdunia
webdunia

ಕೇರಳ ಜಲಪ್ರಳಯ: ಧಾರವಾಡ ಪಂಚಾಂಗದಲ್ಲಿ ಮೊದಲೇ ಉಲ್ಲೇಖ!

ಕೇರಳ ಜಲಪ್ರಳಯ: ಧಾರವಾಡ ಪಂಚಾಂಗದಲ್ಲಿ ಮೊದಲೇ ಉಲ್ಲೇಖ!
ಧಾರವಾಡ , ಗುರುವಾರ, 23 ಆಗಸ್ಟ್ 2018 (19:38 IST)
ಕೇರಳದಲ್ಲಿ ಉಂಟಾಗಿರುವ ಜಳಪ್ರಳಯದ ಬಗ್ಗೆ ಮೊದಲೇ ಧಾರವಾಡ ಪಂಚಾಂಗದಲ್ಲಿ ಉಲ್ಲೇಖ ಮಾಡಲಾಗಿದೆ. ನಗರದ ಗಾಂಧಿ ಬಜಾರ್ ನಲ್ಲಿರುವ ದತ್ತಾಮಂದಿರದ ರಾಜೇಶ್ವರ ಶಾಸ್ತ್ರಿಗಳು ಬರೆದಿರುವ 2018-19 ರ ಪಂಚಾಂಗದಲ್ಲಿ ಜಲಪ್ರಳಯದ ಬಗ್ಗೆ ನಮೂದಿಸಲಾಗಿದೆ.

ಯುಗಾದಿ ಹಬ್ಬದಂದೆ ಮುದ್ರಣವಾಗುವ ಧಾರವಾಡ ಪಂಚಾಂಗದಲ್ಲಿ ಉಲ್ಲೇಖಿಸಲಾಗಿರುವಂತೆ ಕೇರಳಾದಿಯಲ್ಲಿ ಜಲಪ್ರಳಯ ಉಂಟಾಗಿದೆ. ಸಾಕಷ್ಟು ಪ್ರಕೃತಿ ವಿಕೋಪದಿಂದ ಹಾನಿಯುಂಟಾಗಿದೆ. ಭಾರತದ ತಮಿಳುನಾಡು, ಅಂಧ್ರ, ಕೇರಳ, ಜಲಪ್ರಳಯವಾಗುವ ಸಂಭವವಿದೆ ಅಂತಾ ಈ ಧಾರವಾಡ ಪಂಚಾಂಗದಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ ಕೇರಳಾಧಿಯಲ್ಲಿ ಅಪಾರ ಪ್ರಮಾಣದ ಹಾನಿ ಆಗಿದೆ. ಅಲ್ಲದೇ ಕರ್ನಾಟಕದಲ್ಲಿ ರಾಜಕೀಯ ಕ್ಷೀಪ್ರ ಬೆಳವಣಿಗೆ, ಧರ್ಮ, ಸಂಸ್ಕೃತಿಗಳನ್ನ ಎತ್ತಿಹಿಡಿಯುವ ಪಕ್ಷಗಳಿಗೆ ಜಯ ಸಾಧ್ಯವಾಗುವ ಹಾಗೂ ದುರಾಡಳಿತ ಮತ್ತು ಸ್ವೇಚ್ಚಾಚಾರ ನಡೆಸುವ ಪಕ್ಷಗಳಿಗೆ ಜನ ಬೆಂಬಲವಿಲ್ಲದಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಪೂರ್ವಾರ್ಧದಲ್ಲಿ ಮುಖ್ಯ ರಾಜಕಾರಣಿಯ ಅಧಿಕಾರ ತ್ಯಾಗ ಸಾಧ್ಯ ಹಾಗೂ ಕರ್ನಾಟಕದ ಪ್ರಸಿದ್ಧ ರಾಜಕೀಯ ವ್ಯಕ್ತಿ ಕಣ್ಮರೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ರಾಜೇಶ್ವರ ಶಾಸ್ತ್ರೀಜಿ, ಕಳೆದ 80 ವರ್ಷಗಳಿಂದ ಈ ಪಂಚಾಂಗ ಬರೆಯುತ್ತ ಬರಲಾಗುತ್ತಿದ್ದು, ಗ್ರಹಗತಿಗಳ ನೋಡಿ ಎಲ್ಲ ವಿಚಾರಗಳ ಬಗ್ಗೆ ಪಂಚಾಂಗ ರಚನೆ ಆಗಿದೆ ಅಂತಾರೆ.



 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಮಟ್ಟದ ಕಾನೂನು ವಿದ್ಯಾರ್ಥಿಗಳ ಸಮ್ಮೇಳನ