Webdunia - Bharat's app for daily news and videos

Install App

Kerala Rains: ಕಾಸರಗೋಡಿನಲ್ಲಿ ವಿಪರೀತ ಮಳೆ, ಮಧೂರು ದೇವಾಲಯದೊಳಗೇ ನುಗ್ಗಿದ ನೀರು

Krishnaveni K
ಶುಕ್ರವಾರ, 30 ಮೇ 2025 (11:21 IST)
ಕಾಸರಗೋಡು: ಕೇರಳ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ವಿಪರೀತ ಮಳೆಯಾಗುತ್ತಿದ್ದು, ಪ್ರಸಿದ್ಧ ಮಧೂರು ದೇವಾಲಯದ ಪ್ರಾಂಗಣದೊಳಗೇ ನೀರು ನುಗ್ಗಿದೆ.

ಕೇರಳದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದೆ. ಇಂದೂ ಕೂಡಾ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ.

ಈ ನಡುವೆ ಜಿಲ್ಲೆಯ ಪ್ರಸಿದ್ಧ ಗಣಪತಿ ದೇವರ ಸನ್ನಿಧಿಯಾಗಿರುವ ಮಧೂರು ದೇವಾಲಯದಲ್ಲಿ ಮಧುವಾಹಿನಿ ಹೊಳೆ ನೀರು ನುಗ್ಗಿದ್ದು ಪ್ರಾಂಗಣವಿಡೀ ನೀರಿನಲ್ಲಿ ಮುಳುಗಿದೆ. ನಿಂತರೆ ಸೊಂಟದವರೆಗೂ ನೀರು ನಿಲ್ಲುವಷ್ಟು ನೀರು ತುಂಬಿದೆ.

ಇದರಿಂದಾಗಿ ಭಕ್ತರು ನೀರಿನಲ್ಲಿಯೇ ದೇವರಿಗೆ ಪ್ರಾರ್ಥನೆ ಮಾಡುವ ಸ್ಥಿತಿ ಎದುರಾಗಿದೆ. ಪ್ರತೀ ಬಾರಿಯೂ ಇಲ್ಲಿ ಮಳೆಗಾಲದಲ್ಲಿ ನೀರು ದೇವಾಲಯಕ್ಕೆ ನುಗ್ಗುವುದು ಸಾಮಾನ್ಯವಾಗಿದೆ. ಈ ಬಾರಿಯೂ ದೇವಾಲಯದ ಸಮೀಪದಲ್ಲೇ ಇರುವ ಹೊಳೆ ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ಕಾರಣ ಎಲ್ಲಿ ನೋಡಿದರೂ ನೀರು ಎಂಬ ಪರಿಸ್ಥಿತಿಯಾಗಿದೆ.

ಇನ್ನು ಕೇರಳದಲ್ಲಿ ಇನ್ನೂ ಎರಡು ದಿನಗಳಿಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಮಳೆಯಿಂದ ಕೆಲವೆಡೆ ರಸ್ತೆ ಕುಸಿದ ಘಟನೆಗಳೂ ನಡೆದಿವೆ. ಸದ್ಯಕ್ಕೆ ಕೇರಳದ ಕಡಲತೀರಗಳಿಗೆ, ಪ್ರವಾಸೀ ತಾಣಗಳಿಗೆ ತೆರಳದಿರುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Big Schocking: ಆಫ್ರಿಕನ್ ಹಂದಿ ಜ್ವರ ದೃಢ ಬೆನ್ನಲ್ಲೇ ಹಂದಿಗಳ ಸಾಮೂಹಿಕ ಹತ್ಯೆಗೆ ನಿರ್ಧಾರ‌

ಮಹೇಶ್‌ ಶೆಟ್ಟಿ ತಿಮರೋಡಿಗೆ ತಿರುಗು ಬಾಣವಾಗುತ್ತಾ ಬುರುಡೆ ಪ್ರಕರಣ, ತನಿಖೆಯಲ್ಲಿ ಬಿಗ್‌ಟ್ವಿಸ್ಟ್‌

Today Gold Rate:‌ ಬಂಗಾರ ಖರೀದಿಸುವ ಪ್ಲಾನ್‌ನಲ್ಲಿರುವವರಿಗೆ ಬಿಗ್‌ ಶಾಕ್‌

Karnataka Weather: ರಾಜ್ಯದ ಈ ಭಾಗದಲ್ಲಿ ಇಂದು ಭಾರೀ ಮಳೆ

ಸಿಎಂ ಸಿದ್ದರಾಮಯ್ಯ ಇಂದು ಬೆಂಗಳೂರಿನಲ್ಲಿ ಸಿಗಲ್ಲ, ಯಾಕೆ ಗೊತ್ತಾ

ಮುಂದಿನ ಸುದ್ದಿ
Show comments