Select Your Language

Notifications

webdunia
webdunia
webdunia
webdunia

ಎರಡುವರೆ ತಿಂಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‏ವೇ ಭಾಗಶಃ ಬಂದ್

Kempegowda International Airport
ಬೆಂಗಳೂರು , ಶನಿವಾರ, 5 ನವೆಂಬರ್ 2016 (15:55 IST)
ಕೇಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ 2017 ಫೆಬ್ರವರಿಯಿಂದ- ಎಪ್ರಿಲ್‌ವರೆಗೆ ಸುಮಾರು ಎರಡುವರೆ ತಿಂಗಳುಗಳ ಕಾಲ ಭಾಗಶಃ ಮುಚ್ಚಲಿದೆ. 
 
ಎನ್‌ಒಟಿಎಎಮ್ ಪ್ರಕಾರ (ನೋಟಿಸ್ ಟು ಏರ್‌ಮ್ಯಾನ್ ಎ2039/16) ರನ್ ವೇ ಯಿಂದ ಕ್ಷಿಪ್ರ ನಿರ್ಗಮನ ಟ್ಯಾಕ್ಸಿ ಮಾರ್ಗಗಳ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ಈ ಅವಧಿಯಲ್ಲಿ ಮುಂಜಾನೆ 10.30ರಿಂದ ಸಂಜೆ ಗಂಟೆಯವರೆಗೆ ರನ್ ವೇಯನ್ನು ಮುಚ್ಚಲಾಗುವುದು.
 
ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲಿದ್ದೇವೆ. ಫೆಬ್ರವರಿ 19ರಿಂದ ಎಪ್ರಿಲ್ 30ರ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸಲಿದ್ದೇವೆ, ಎಂದು ಎನ್‌ಒಟಿಎಎಮ್  ಹೇಳಿದೆ. 
 
2008ರಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಶುರು ಆದಾಗಿನಿಂದ ರನ್ ವೇ ಭಾಗಶಃ ಮುಚ್ಚುತ್ತಿರುವುದು ಇದು ಎರಡನೆಯ ಬಾರಿ. 
ಈ ಮೊದಲು 2012ರಲ್ಲಿ ಕೂಡ ಮಾರ್ಚ್ 11 ರಿಂದ ಏಪ್ರಿಲ್ 3ರವರೆಗೆ 24 ದಿನ ರನ್ ವೇಯನ್ನು ಭಾಗಶಃ ಮುಚ್ಚಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಗೆ ರಾಜಕೀಯ ಅನಿವಾರ್ಯ, ನನಗಲ್ಲ: ಜಮೀರ್ ಅಹ್ಮದ್