Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್‌ರನ್ನು ಜೈಲಿನಲ್ಲಿ ನಿಧಾನವಾಗಿ ಸಾವಿನೆಡೆಗೆ ತಳ್ಳಲಾಗುತ್ತಿದೆ: ಎಎಪಿ ಆರೋಪ

Delhi Chief Minister Aravindh Kejriwal

Sampriya

ನವದೆಹಲಿ , ಶನಿವಾರ, 20 ಏಪ್ರಿಲ್ 2024 (19:53 IST)
ನವದೆಹಲಿ: ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಇನ್ಸುಲಿನ್‌ ನೀಡಲು ಹಾಗೂ ವೈದ್ಯರನ್ನು  ಫೋನ್ ಮೂಲಕ ಭೇಟಿಗೆ ಅವಕಾಶ ನೀಡದೆ ಅವರನ್ನು ನಿಧಾನವಾಗಿ ಸಾವಿನೆಡೆಗೆ ತಳ್ಳಲಾಗುತ್ತಿದೆ ಎಂದು ಆಮ್‌ ಆದ್ಮಿ ಪಕ್ಷ ಆರೋಪಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ  ಎಎಪಿ ವಕ್ತಾರ ಸೌರಭ್‌ ಭಾರದ್ವಾಜ್‌ ಅವರು,  ಕೇಜ್ರಿವಾಲ್‌ ಅವರು ಡಯಾಬಿಟಿಸ್‌ (ಮಧುಮೇಹ) ಹೊಂದಿದ್ದಾರೆ. ಆದ್ದರಿಂದ ಇನ್ಸುಲಿನ್‌ ಪಡೆಯಲು ಮತ್ತು ಅವರ ಕುಟುಂಬ ವೈದ್ಯರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂಪರ್ಕಿಸಲು ಅನುಮತಿ ಕೋರಿದ್ದಾರೆ. ಆದರೆ, ಅವರ ಮನವಿಯನ್ನು ಜೈಲಿನ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿದಾಗಿನಿಂದ ಅವರ ಸಕ್ಕರೆ ಮಟ್ಟವನ್ನು (ಶುಗರ್‌ ಲೆವಲ್‌) ನಿಯಂತ್ರಿಸಲು ಇನ್ಸುಲಿನ್‌ ಅನ್ನು ನೀಡಲಾಗಿಲ್ಲ. ಇದು ಆತಂಕಕಾರಿಯಾಗಿದೆ ಎಂದು ಕೇಜ್ರಿವಾಲ್‌ ಪರ ವಕೀಲ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ಕಳೆದ 2022 ವರ್ಷಗಳಿಂದ ಡಯಾಬಿಟಿಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಇನ್ಸುಲಿನ್‌ ಪಡೆಯಲು ನಿರಾಕರಿಸುವ ಮೂಲಕ ಅವರ ಸಾವಿಗೆ ಪಿತೂರಿ ನಡೆಯುತ್ತಿದೆ  ಎಂದು ಭಾರದ್ವಾಜ್‌ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಆಡಳಿತದಲ್ಲಿ ಬಾಂಬ್ ಸ್ಫೋಟ, ಯುವತಿಯರ ಹತ್ಯೆ: ಎಚ್ಚರದಿಂದಿರಿ ಎಂದ ಮೋದಿ