ಕಾವೇರಿ ತಂತ್ರಾಂಶ ಹ್ಯಾಕ್‌ - ವಂಚಕರು ಅರೆಸ್ಟ್‌

Webdunia
ಸೋಮವಾರ, 30 ಅಕ್ಟೋಬರ್ 2023 (15:20 IST)
ಕರ್ನಾಟಕ ಸರ್ಕಾರದ ಕಾವೇರಿ ತಂತ್ರಾಂಶವನ್ನು ಹ್ಯಾಕ್‌ ಮಾಡಿ ಹಲವರ ಬ್ಯಾಂಕ್‌ ಖಾತೆಗಳಿಂದ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ 3 ಜನ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 
 
ದೀಪಕ್‌ ಕುಮಾರ್‌ ಹೆಂಬ್ರಮ್‌ (33), ವಿವೇಕ್‌ ಕುಮಾರ್‌ ಬಿಸ್ವಾಸ್‌ (24) ಹಾಗೂ ಮದನ್‌ ಕಮಾ (23) ಬಂಧಿತ ಆರೋಪಿಗಳಾಗಿದ್ದು,ಕಾವೇರಿ ತಂತ್ರಾಂಶ ಹ್ಯಾಕ್‌ ಮಾಡಿದ್ದ ಆರೋಪಿಗಳು ಸಾರ್ವಜನಿಕರ ಆಸ್ತಿ ದಾಖಲೆ, ಬೆರಳಚ್ಚು, ಆಧಾರ್‌ ಹಾಗೂ ಬ್ಯಾಂಕ್‌ ಮಾಹಿತಿಯನ್ನು ಕದ್ದು ವಂಚನೆ ನಡೆಸಿದ್ದರು. 
 
ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಮೊಬೈಲ್‌ ಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ಕಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
 
ಕರ್ನಾಟಕದ 1 ಸಾವಿರ ನೋಂದಣಿ ಪತ್ರಗಳು ಹಾಗೂ ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳ 300 ಕ್ಕೂ ಅಧಿಕ ಪಿಡಿಎಫ್‌ ಪ್ರತಿಗಳನ್ನು ಆರೋಪಿಗಳಿಂದ  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರಿನಲ್ಲಿ ಡಿಕೆಶಿ ಜತೆಗೆ ರಾಹುಲ್ ಆಡಿದ ಮಾತಿನ ಬಗ್ಗೆ ಡಿಕೆ ಸುರೇಶ್ ಹೀಗಂದ್ರು

ರಿಯಲ್ ಎಸ್ಟೇಟ್ ಕಚೇರಿಗಳಂತಾದ ಪೊಲೀಸ್ ಇಲಾಖೆ: ಅಶ್ವತ್ಥನಾರಾಯಣ್

ಮೈಕ್‌ ಆಫ್ ಮಾಡಿ ರಾಷ್ಟ್ರಗೀತೆಗೆ ಅಪಮಾನ, ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ

ರಾಸಲೀಲೆ ಪ್ರಕರಣದಲ್ಲಿ ಅಮಾನತುಗೊಂಡಿರುವ ಡಿಜಿಪಿ ರಾಮಚಂದ್ರ ರಾವ್ ಅವರ ವೈಯ್ಯಕ್ತಿಕ ಬದುಕು ಹೀಗಿದೆ

ಕರುಣೆಯಲ್ಲಿ ವಿಚಾರಿಸಲು ಹೋಗಿ ಭಿಕ್ಷುಕನ ಆಸ್ತಿ ನೋಡಿ ದಂಗಾದ ಅಧಿಕಾರಿಗಳು

ಮುಂದಿನ ಸುದ್ದಿ
Show comments