Webdunia - Bharat's app for daily news and videos

Install App

Karnataka Weather: ವಾರಂತ್ಯಕ್ಕೆ ರಾಜ್ಯದ ಹವಾಮಾನ ವರದಿ ಇಲ್ಲಿದೆ

Krishnaveni K
ಶನಿವಾರ, 28 ಫೆಬ್ರವರಿ 2026 (08:46 IST)
ಬೆಂಗಳೂರು: ಈ ವಾರ ಕೆಲವು ಕಡೆ ಮಳೆ, ಇನ್ನು ಕೆಲವು ಕಡೆ ವಿಪರೀತ ಬಿಸಿಲು ಕಂಡುಬಂದಿತ್ತು. ವಾರಂತ್ಯಕ್ಕೆ ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲೂ ಕಂಡುಬಂದಿತ್ತು. ನೆರೆಯ ಕೇರಳದಲ್ಲಿ ನಿನ್ನೆಯವರೆಗೂ ಕೆಲವು ಕಡೆ ಮಳೆಯಾಗಿದ್ದು ಇದೆ. ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಜಿಲ್ಲೆಗಳಲ್ಲೂ ಈ ವಾರ ಅಲ್ಪ ಸ್ವಲ್ಪ ಮಳೆಯಾಗಿದೆ.

ಆದರೆ ವಾರಂತ್ಯಕ್ಕೆ ರಾಜ್ಯದಲ್ಲಿ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು ತುಂತುರು ಮಳೆ ಅಥವಾ ಮೋಡ ಕವಿದ ವಾತಾವರಣ ಕಂಡುಬಂದರೂ ಅಚ್ಚರಿಯಿಲ್ಲ. ಹಾಗಂತ ಶೆಖೆಯೇನೂ ಕಡಿಮೆಯಾಗಲ್ಲ.

ಕರಾವಳಿ ಜಿಲ್ಲೆಗಳಲ್ಲಂತೂ ಗರಿಷ್ಠ ತಾಪಮಾನ 33 ಡಿಗ್ರಿ ದಾಟಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಗರಿಷ್ಠ ತಾಪಮಾನ 32 ಡಿಗ್ರಿಯಷ್ಟಾಗಲಿದ್ದು, ಭಾಗಶಃ ಮೋಡಕವಿದ ವಾತಾವರಣವೂ ಕಂಡುಬಂದೀತು. ಇಂದು ಮತ್ತು ನಾಳೆ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 32 ಡಿಗ್ರಿಯಷ್ಟು ಮತ್ತು ಕನಿಷ್ಠ ತಾಪಮಾನ ಸರಾಸರಿ 19 ಡಿಗ್ರಿಯಷ್ಟು ಕಂಡುಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಲು ನಮಗೊಂದು ಅವಕಾಶ ಕೊಡಿ: ಬಿವೈ ವಿಜಯೇಂದ್ರ

18th BRICS: ರಾಷ್ಟ್ರ ರಾಜಧಾನಿಯಲ್ಲಿ ನಿಯೋಜನೆಗೊಂಡ ಪೊಲೀಸರೆಷ್ಟು ಗೊತ್ತಾ

ನದಿ ನೀರನ್ನು ಕಲುಷಿತಗೊಳಿಸಿದ್ರೆ ಕಾರ್ಖಾನೆಗಳಿಗೆ ಬೀಗ ಗ್ಯಾರಂಟಿ: ರಾಮಲಿಂಗಾರೆಡ್ಡಿ ವಾರ್ನಿಂಗ್

ಹಣ ಕಲೆಕ್ಷನ್ ವಿಚಾರಕ್ಕೆ ಕೈ ಕೈ ಮಿಲಾಯಿಸಿಕೊಂಡ ಎರಡು ಗುಂಪಿನ ತೃತೀಯ ಲಿಂಗಿಗಳು, Video

ಧನನಾಯಕ ಆಗೋದು ಸುಲಭ ಜನನಾಯಕ ಆಗೋದು ಕಷ್ಟ

ಮುಂದಿನ ಸುದ್ದಿ
Show comments