ಬೆಂಗಳೂರು: ರಾಜ್ಯದಲ್ಲಿ ವಾರಂತ್ಯಕ್ಕೆ ಕೆಲವು ಕಡೆ ಮೋಡ ಕವಿದ ವಾತಾವರಣ ಮತ್ತು ಸಣ್ಣ ಹನಿ ಮಳೆಯಾಗಿತ್ತು. ಈ ವಾರ ಬಿಸಿಲು ಹೆಚ್ಚಾಗುತ್ತಾ, ಮಳೆಯಿರುತ್ತಾ ಇಲ್ಲಿದೆ ವಾರದ ಹವಾಮಾನ ವರದಿ.
ಕಳೆದ ವಾರಂತ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಣ್ಣ ಮಳೆಯಾಗಿತ್ತು. ಬೆಂಗಳೂರಿನಲ್ಲೂ ಭಾಗಶಃ ಮೋಡ ಕವಿದ ವಾತಾವರಣವಿತ್ತು. ವಿಪರೀತ ಬಿಸಿಲಿನ ನಡುವೆಯೂ ಈ ವಾತಾವರಣ ಬದಲಾವಣೆ ಕಂಡುಬಂದಿತ್ತು.
ಈ ವಾರ ಯಾವುದೇ ಜಿಲ್ಲೆಗೂ ಮಳೆಯ ಸೂಚನೆಯಿಲ್ಲ. ಆದರೆ ಬಿಸಿಲಿನ ಝಳ ಇನ್ನಷ್ಟು ಹೆಚ್ಚಾಗಲಿದೆ. ತಾಪಮಾನದಲ್ಲಿ 2-3 ಡಿಗ್ರಿಯಷ್ಟು ಏರಿಕೆ ಕಂಡುಬರಲಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಯಲ್ಲಿ ಈ ವಾರ ಗರಿಷ್ಠ ತಾಪಮಾನ 36 ಡಿಗ್ರಿಯವರೆಗೂ ತಲುಪುವ ಸಾಧ್ಯತೆಯಿದೆ.
ಈ ವಾರ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 31-32 ಡಿಗ್ರಿಯಷ್ಟು ಕಂಡುಬರಲಿದೆ. ಕನಿಷ್ಠ ತಾಪಮಾನ ಸರಾಸರಿ 18-19 ಡಿಗ್ರಿಯಷ್ಟು ಕಂಡುಬರುವುದು. ವಾರವಿಡೀ ಹಗಲಿಡೀ ಭಾರೀ ಬಿಸಿಲು ಕಂಡುಬರಲಿದೆ. ಬೆಂಗಳೂರಿನಲ್ಲೇ ಗರಿಷ್ಠ ತಾಪಮಾನ 31 ಡಿಗ್ರಿಯಷ್ಟು ಕಂಡುಬರುವುದು. ಬಳ್ಳಾರಿ, ರಾಯಚೂರು, ಕಲಬುರಗಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟು ಕಂಡುಬರಲಿದೆ.