ಬೆಂಗಳೂರು: ಕರ್ನಾಟಕದಲ್ಲಿ ಫೆಬ್ರವರಿ 1, 2 ರಂದು ಮಳೆಯಾಗಲಿದೆ ಎಂದು ಈ ಮೊದಲು ಹವಾಮಾನ ವರದಿಗಳು ಹೇಳಿದ್ದವು. ಆದರೆ ಇದು ನಿಜವಾಗುತ್ತಾ ಇಲ್ಲಿದೆ ವಿವರ.
ಒಂದು ವಾರದ ಹಿಂದೆಯೇ ಹವಾಮಾನ ಇಲಾಖೆ ಫೆಬ್ರವರಿ ಆರಂಭದಲ್ಲಿ ಎರಡು ದಿನ ಕೆಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಿತ್ತು. ಇದರಿಂದ ರೈತರು ಕಂಗಾಲಾಗಿದ್ದರು. ಬೆಳೆ ನಷ್ಟವಾಗುವ ಭೀತಿಯಲ್ಲಿದ್ದರು.
ವಾಯುಭಾರ ಕುಸಿತದ ಸಾಧ್ಯತೆಯಿದ್ದು ನಿನ್ನೆ ಮತ್ತು ಇಂದು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಆದರೆ ಹವಾಮಾನ ವರದಿಗಳು ಸುಳ್ಳಾಗುವ ಲಕ್ಷಣ ಕಂಡುಬಂದಿದೆ. ನಿನ್ನೆ ಎಂದಿನಂತೆ ತಾಪಮಾನ ಮುಂದುವರಿದಿತ್ತು. ಮಳೆಯ ಯಾವ ಲಕ್ಷಣವೂ ಇರಲಿಲ್ಲ.
ಹೀಗಾಗಿ ವಾಯುಭಾರ ಕುಸಿತದ ಸಾಧ್ಯತೆಯಿಲ್ಲ, ಸದ್ಯಕ್ಕೆ ಮಳೆ ಬರುವ ಸೂಚನೆಯೂ ಇಲ್ಲ ಎಂದಿರುವ ಹವಾಮಾನ ಇಲಾಖೆ, ಒಣಹವೆ ಇನ್ನಷ್ಟು ದಿನಗಳಿಗೆ ಏರಿಕೆಯಾಗಲಿದೆ ಎಂದಿದೆ. ಆದರೆ ತಾಪಮಾನದಲ್ಲಿ ಕೊಂಚ ಏರಿಕೆಯಾಗಲಿದೆ. ಹೀಗಾಗಿ ಮಳೆಯ ಆತಂಕದಲ್ಲಿದ್ದ ರೈತರು ಕೊಂಚ ನಿರಾಳವಾಗುವಂತೆ ಮಾಡಿದೆ.