Daily Horoscope
✕

Karnataka Weather: ಎಚ್ಚರಿಕೆ ಗಮನಿಸಿ, ಇಂದು ತಾಪಮಾನದಲ್ಲಿ ಮತ್ತಷ್ಟು ಹೆಚ್ಚಳ

Krishnaveni K
ಶುಕ್ರವಾರ, 20 ಫೆಬ್ರವರಿ 2026 (08:34 IST)
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದೆ. ಇಂದಿನ ಹವಾಮಾನ ವರದಿ ಗಮನಿಸಿದರೆ ಮತ್ತಷ್ಟು ತಾಪಮಾನದಲ್ಲಿ ಏರಿಕೆ ಕಾಣಬಹುದಾಗಿದೆ.

ಕಳೆದ ಎರಡು ದಿನಗಳಿಂದ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಕೇರಳದಲ್ಲಿ ಇಂದು ಮಳೆಯ ಸೂಚನೆಯಿದೆ. ಈ ಹಿನ್ನಲೆಯಲ್ಲಿ ಕೆಲವು ಕಡೆ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಆದರೆ ಇಂದು ರಾಜ್ಯದಲ್ಲಿ ಬಹುತೇಕ ಬಿಸಿಲಿನ ವಾತಾವರಣವಿರಲಿದೆ.

ಹವಾಮಾನ ವರದಿಗಳ ಪ್ರಕಾರ ಇಂದು ರಾಜ್ಯದಲ್ಲಿ ಮಳೆಯ ಸೂಚನೆಯಿಲ್ಲ. ಚಳಿಯೂ ಇಂದು ತಕ್ಕಮಟ್ಟಿಗೆ ಕಡಿಮೆಯಾಗಿರಲಿದೆ. ಬಹುತೇಕ ಒಣ ಹವೆ ಮುಂದುವರಿಯುವುದು. ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ.

ಇಂದು ರಾಜ್ಯದ ಗರಿಷ್ಠ ತಾಪಮಾನ 31 ಡಿಗ್ರಿಗೆ ಏರಿಕೆಯಾಗಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿಯಷ್ಟಾಗಲಿದೆ. ಕರಾವಳಿ ಜಿಲ್ಲೆಯಲ್ಲಂತೂ ಇಂದು ಗರಿಷ್ಠ ತಾಪಮಾನ 36 ಡಿಗ್ರಿಗೆ ಏರಿಕೆಯಾಗಲಿದೆ. ವಿಪರೀತ ಬಿಸಿಲು ಮತ್ತು ಸೆಖೆಯ ವಾತಾವರಣ ಕಂಡುಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯಂತಹ ದುರಂತ ನಾಯಕನ ಸಹಸವಾಸ ಮಾಡಿ ಖರ್ಗೆಯವರೂ ಹೀಗಾದ್ರು: ಛಲವಾದಿ ನಾರಾಯಣಸ್ವಾಮಿ

ಅಪ್ಪ, ಮಗ ಇಬ್ರೂ ಸರಿಯಿಲ್ಲ, ಖರ್ಗೆ ಬಾಯಿ ಫಿನಾಯಿಲ್ ಹಾಕಿ ತೊಳೆಯಬೇಕು: ಆರ್ ಅಶೋಕ್ ವಾಗ್ದಾಳಿ

ಹೋಟೆಲ್ ಕಾರಿಡಾರ್ ನಲ್ಲಿ ದೊಪ್ಪನೆ ಬಿದ್ದ ನವವಧು, ಎತ್ತಿ ಹೋದ ಪತಿ: 5 ಸೆಕೆಂಡ್ನ ಶಾಕಿಂಗ್ ಸಿಸಿಟಿವಿ ದೃಶ್ಯ ವೈರಲ್ Video

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ವೈದ್ಯನಂತೆ ನಟಿಸಿ ಚುಚ್ಚುಮದ್ದು ನೀಡಲು ಮುಂದಾದ ವ್ಯಕ್ತಿ: ತಕ್ಷಣವೇ ಓಡಿಹೋದ ನಕಲಿ ವಿಕಲಚೇತನ ಭಿಕ್ಷುಕ Video

ಮುಂದಿನ ಸುದ್ದಿ
Show comments