Daily Horoscope
✕

Karnataka Weather: ಈ ವಾರ ಮಳೆ ಕಡಿಮೆ ಆದರೆ ತಾಪಮಾನ ಹೇಗಿರಲಿದೆ ನೋಡಿ

Krishnaveni K
ಸೋಮವಾರ, 8 ಡಿಸೆಂಬರ್ 2025 (08:45 IST)
ಬೆಂಗಳೂರು: ರಾಜ್ಯದಲ್ಲಿ ಈ ವಾರ ಮಳೆಯಾಗುವ ಸಾಧ್ಯತೆ ಕಡಿಮೆ. ಆದರೆ ವಾರವಿಡೀ ತಾಪಮಾನದಲ್ಲಿ ಆಗುವ ಬದಲಾವಣೆ ತಪ್ಪದೇ ಗಮನಿಸಿ. ಈ ವಾರದ ಹವಾಮಾನ ವರದಿ ಇಲ್ಲಿದೆ ನೋಡಿ.

ಕಳೆದ ವಾರ ವಾಯುಭಾರ ಕುಸಿತದಿಂದ ಅಲ್ಲಲ್ಲಿ ಮಳೆಯಾಗಿತ್ತು. ಈ ವಾರ ಮಳೆಯ ಸಾಧ್ಯತೆ ಬಹುತೇಕ ಜಿಲ್ಲೆಗಳಲ್ಲಿ ಇಲ್ಲ. ಆದರೆ ತಾಪಮಾನ ಮಾತ್ರ ಕನಿಷ್ಠ ಮಟ್ಟಕ್ಕೆ ತಲುಪಲಿದೆ. ವರದಿಗಳ ಪ್ರಕಾರ ವಾರಂತ್ಯಕ್ಕೆ ವಿಪರೀತ ಎನಿಸುವಷ್ಟು ಚಳಿಯಿರಲಿದೆ.

ವಾರದ ಆರಂಭದಲ್ಲಿ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 26 ಡಿಗ್ರಿಯಷ್ಟಿದ್ದರೆ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟಿರಲಿದೆ. ಆದರೆ ವಾರದ ಮಧ್ಯದಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿಗೆ ತಲುಪಲಿದ್ದು, ವಾರಂತ್ಯವಾಗುತ್ತಿದ್ದಂತೇ ಇದು ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರಲಿದೆಯಷ್ಟೇ. ಆದರೆ ಉಳಿದಂತೆ ಚಿಕ್ಕಮಗಳೂರು, ಕೊಡಗು, ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳು, ಉತ್ತರ ಕನ್ನಡ, ಕಲಬುರಗಿ, ಧಾರವಾಡ, ಬೆಳಗಾವಿ, ಯಾದಗಿರಿ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 16 ರಿಂದ 14 ಡಿಗ್ರಿಯವರೆಗೆ ಇಳಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮುಂದೆ ಚಳಿ ಮತ್ತಷ್ಟು ತೀವ್ರವಾಗುವುದು ಖಚಿತ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಜಮೀನಿನ ಮೂಲ ದಾಖಲೆಗಳು ಕಳೆದುಹೋಗಬಾರದೇ, ಆಸ್ತಿ ಪತ್ರಗಳನ್ನು ಜೋಪಾನವಾಗಿಡಲು ಈ 4 ಸ್ಮಾರ್ಟ್ ವಿಧಾನಗಳನ್ನು ಅನುಸರಿಸಿ

ಎಸ್ಎಸ್ಎಲ್ಸಿ ಪಾಸಾದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸಿಗುವ ಟಾಪ್ 5 ಸ್ಕಾಲರ್ಶಿಪ್ಗಳಿವು

ಸರೋವರದ ನೀರು ಸಖತ್ ಆಗಿದೆ ಎಂದು ಮಲಗಿದ್ದ ಯುವತಿಗೆ ಶಾಕ್ ಕಾದಿತ್ತು: ಮೈ ಝುಮ್ ಎನಿಸುವ Video

ಚಿನ್ನದ ಬೆಲೆ ದಿಢೀರ್ ಕುಸಿಯುತ್ತಿರುವುದೇಕೆ, ಜಾಗತಿಕ ಟ್ರೆಂಡ್ ಎಷ್ಟು ದಿನ ಇರಬಹುದು

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಹವಾಮಾನ ಮುನ್ಸೂಚನೆ: ಹೇಗಿರಲಿದೆ ವಾತಾವರಣ

ಮುಂದಿನ ಸುದ್ದಿ
Show comments