ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಈ ದಿನದಿಂದ ಬೇಸಿಗೆ ಆರಂಭಕ್ಕೆ ಮುನ್ನ ಮಳೆ

Krishnaveni K
ಬುಧವಾರ, 29 ಜನವರಿ 2025 (08:51 IST)
ಬೆಂಗಳೂರು: ಕರ್ನಾಟಕದಲ್ಲಿ ಈಗ ಹವಾಮಾನ ನಿಧಾನವಾಗಿ ಬದಲಾಗುತ್ತಿದ್ದು, ಬೇಸಿಗೆ ಆರಂಭಕ್ಕೆ ಮುನ್ನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿದೆ. ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ.
 

ನಿನ್ನೆಯವರೆಗೆ ರಾಜ್ಯದಲ್ಲಿ ವಿಪರೀತ ಚಳಿಯ ವಾತಾವರಣವಿತ್ತು. ಆದರೆ ಇಂದಿನಿಂದ ವಾತಾವರಣದಲ್ಲಿ ಕೊಂಚ ಬದಲಾವಣೆಯಾಗಲಿದ್ದು, ತಾಪಮಾನ ಕೊಂಚ ಏರಿಕೆಯಾಗಲಿದೆ. ಇಂದಿನಿಂದ ಕನಿಷ್ಠ ತಾಪಮಾನ 19 ಡಿಗ್ರಿಗೆ ತಲುಪಲಿದ್ದು, ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್ ಗೆ ತಲುಪಲಿದೆ. ಹೀಗಾಗಿ ಇಂದಿನಿಂದ ಕೊಂಚ ಸೆಖೆ ಕಂಡುಬಂದೀತು.

ಇಂದಿನಿಂದ ತಾಪಾಮನದಲ್ಲಿ ದಿನೇ ದಿನೇ ಏರಿಕೆಯಾಗಲಿದೆ. ಹಾಗಂತ ಚಿಂತೆ ಬೇಡ. ಫೆಬ್ರವರಿ ಆರಂಭದಲ್ಲೇ ಬೇಸಿಗೆ ಆರಂಭಕ್ಕೆ ಮುನ್ನ ಮಳೆಯಾಗಲಿದೆ. ಫೆಬ್ರವರಿ 1,2 ರಂದು ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ.

ಯಾವ ಜಿಲ್ಲೆಗಳಿಗೆ ಮಳೆ?
ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ.

ಉಳಿದಂತೆ ಉತ್ತರ ಕನ್ನಡ, ಹಾವೇರಿ, ಗದಗ, ಬಳ್ಳಾರಿ, ಚಿತ್ರದುರ್ಗ, ಕಲಬುರಗಿ, ಧಾರವಾಡ, ವಿಜಯನಗರ, ತುಮಕೂರು, ಬೀದರ್, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಎಂದಿನಂತೆ ಚಳಿಯ ವಾತಾವರಣ ಮುಂದುವರಿಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿಂಡಿ ಖರೀದಿಸುತ್ತಿದ್ದವಳು ಕ್ಷಣಾರ್ಧದಲ್ಲಿ ಸಾವು: ಸಣ್ಣ ತಪ್ಪಿನಿಂದ ರೈಲಿನಡಿಗೆ ಸಿಲುಕಿ ಪೀಸ್ ಪೀಸ್ Video

ದೆಹಲಿಯ ಜಂತರ್ ಮಂಥರ್ ನಲ್ಲಿ ಜಿರಳೆ ಪಾರ್ಟಿ ಸದಸ್ಯರ ಮೇಲೆ ಲಾಠಿ ಚಾರ್ಜ್: ದಿಕ್ಕಾಪಾಲಾಗಿ ಓಡಿದ ಸಿಜೆಪಿ ಸದಸ್ಯರು Video

ಶಾಲೆಗೆ ವಿದ್ಯಾರ್ಥಿ ಹನುಮಾನ್ ಚಾಲೀಸಾ ತಂದಿದ್ದಕ್ಕೆ ಬಿಸಾಕಿದ ಶಿಕ್ಷಕಿ: ಮುಂದೇನಾಯ್ತು ನೋಡಿ Video

ಗೃಹಲಕ್ಷ್ಮಿ ಹಣ ಕರೆಕ್ಟ್ ಆಗಿ ಖಾತೆಗೆ ಬರಬೇಕೆಂದರೆ ಈ ಎರಡು ನಿಯಮ ಪಾಲಿಸಬೇಕು

Karnataka weather: ವಾರವಿಡೀ ರಾಜ್ಯದಲ್ಲಿ ಮಳೆಯಿರುತ್ತಾ, ಇಲ್ಲಿದೆ ಹವಾಮಾನ ವರದಿ

ಮುಂದಿನ ಸುದ್ದಿ
Show comments